ಕುರಿಕೋಟಾ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ

0
1041

ಕಲಬುರಗಿ, ಡಿ.6: ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯ ನೀರಿಗೆ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ರವಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದ ಬಗ್ಗೆ ವರದಿಯಾಗಿದೆ.
ಕಲಬುರಗಿಯ ರೇವಣಸಿದ್ದೇಶ್ವರ ಕಾಲನಿ ನಿವಾಸಿ ಮಂಜುನಾಥ ರಂಗರಾವ ಕಾಂಬಳೆ (24) ಎಂಬಾತನೇ ಸೇತುವೆಗೆ ಹಾರಿದ ಯುವಕನೆಂದು ಹೇಳಲಾಗಿದ್ದು, ಆತ್ಮಹತ್ಯೆಗೆ ಇನ್ನು ನಿಖರವಾದ ಕಾರಣ ತಿಳಿದಿಲ್ಲ, ಮನೆಯವರಿಗೆ ಕರೆ ಮಾಡಿ ಕುರಿಕೋಟಾ ಸೇತುವೆಯಲ್ಲಿ ಜಿಗಿಯುತ್ತಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಕುಟುಂಬದವರು ಅಲ್ಲಿಗೆ ದೌಡಾಯಿಸಿದ್ದಾರೆ. ಆತ ತಂದಿದ್ದ ತನ್ನ ದ್ವಿಚಕ್ರವಾಹನ ಅಲ್ಲಿ ಪತ್ತೇಯಾಗಿದ್ದು, ಶವ ಪತ್ತೆಯಾಗಿಲ್ಲ. ಮಧ್ಯಾಹ್ನದಿಂದ ಸ್ಥಳೀಯ ಈಜುಗಾರರು ಸೇರಿ ನಾಡದೋಣಿಯಿಂದ ಹುಟುಕಾಟದ ಕಾರ್ಯಾಚರಣೆ ನಡೆಸಿದರೂ ರಾತ್ರಿಯಾದರೂ ಶವ ಪತ್ತೇಯಾಗಿಲ್ಲ.
ಘಟನಾ ಸ್ಥಳಕ್ಕೆ ಮಹಾಗಾಂವ ಪಿಎಸ್‌ಐ ಹುಸೇನ್ ಬಾಷಾ ಮತ್ತು ಸಿಬ್ಬಂದಿ ಭೇಟಿ ನೀಡಿದರು.
ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಅವರು ಯುವಕನ ಹುಡುಕಾಟ ಆರಂಭಿಸಿದ್ದಾರೆ. ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here