11 ರನ್‌ಗಳಿಂದ ಮೊದಲ ಟಿ-ಟ್ವೆಂಟಿ ಗೆದ್ದ ಭಾರತ

0
939

ಕ್ಯಾನಬರಾ, ಡಿ. 3: ಪ್ರವಾಸಿ ಭಾರತ ಮತ್ತು ಆಸಿಸ್ ತಂಡಗಳ ಮಧ್ಯ ಶುಕ್ರವಾರ ನಡೆದ ಮೊದಲ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳಿಂದ ಜಯಗಳಿಸಿದೆ.
ಇಲ್ಲಿನ ಮನುಕಾ ಓವಲ್‌ನಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು ಕೊಂಡು 161 ರನ್ ಮಾಡಿತು.
ನಂತರ ಬ್ಯಾಟ್ ಮಾಡಿದ ಆಸಿಸ್ ತಂಡವು ಭಾರತ ತಂಡದ 161 ರನ್‌ಗಳ ಬೆನ್ನತ್ತಿ 7 ವಿಕೆಟ್ ಕಳೆದುಕೊಂಡು 150 ರನ್ ಮಾತ್ರ ಸೇರಿಸಿ 11 ರನ್‌ಗಳಿಂದ ಸೋಲ ನುಭವಿಸಿತು.
ಭಾರತ ಪರ ಕೆ.ಎಲ್. ರಾಹುಲ್ 40 ಎಸೆತಗಳಲ್ಲಿ 5 ಫೋರ್, ಒಂದು ಸಿಕ್ಸರ್ ನೆರವಿನಿಂದ 51 ರನ್ ಮಾಡಿ ಔಟಾದರು.
ಸ್ವಲ್ಪ ಹೊತ್ತು ಕೆ.ಎಲ್.ರಾಹುಲ್‌ಗೆ ಸಾತ ನೀಡಿದ ಸಂಜು ಶ್ಯಾಮಸನ್ 23 ರನ್ ಗಳಿಸಿ ಔಟಾದ ನಂತರ ಬಂದ ರವೀಂದ್ರ ಜಡೆಜಾ 23 ಎಸೆತಗಳಲ್ಲಿ 44 ರನ್‌ಗಳಿಸಿ ಔಟಾದರು.
ನಂತರ ಭಾರತ ರನ್ ಚೇಜ್ ಮಾಡಿದ ಆಸ್ಟೇಲಿಯಾ ತಂಡ ಆರಂಭಿಕ ಬ್ಯಾಟ್ಸ್ಮನ್‌ಗಳು ಬಿರುಸಿನ ಆಟವಾಡಿ ಮೊದಲ ವಿಕೆಟ್‌ಗೆ 56 ರನ್ ಸೇರಿಸಿ, ತಂಡಕ್ಕೆ ಉತ್ತಮ ಆರಂಭ ಕೊಟ್ಟರಾದರೂ ರವೀಂದ್ರ ಜಡೆಜಾ ಅವರ ರಿಟೈರ್ಡ್ಹರ್ಟನಿಂದಾಗಿ ಸ್ಪೀನ ಮಾಂತ್ರಿಕೆ ಯಜುವೇಂದ್ರ ಚಹೆಲ್ ಅವರ 4 ಓವರಗಳಲ್ಲಿ 3 ವಿಕೆಟ್ ಕಬಳಿಸಿ ಆಸ್ಟೆçÃಲಿಯಾ ಬ್ಯಾಟಿಂಗ್ ಬೆನ್ನುಲುಬು ಮುರಿ ದು ಭಾರತಕ್ಕೆ ಜಯದೊರಕಿಸಿದಲ್ಲದೇ ಮೊದಲ ಪಂದ್ಯವೊAದರಲ್ಲಿ ಬದಲಿ ಆಟಗಾರರಾಗಿ ಬಂದು ಪಂದ್ಯ ಪುರು ಷೋತ್ತಮ ಪ್ರಶಸ್ತಿ ಪಡೆದ ಮೊದಲ ಆಟಗಾರ ಕೀರ್ತಿಗೆ ಪಾತ್ರರಾದರು.
ಈ ಸರಣಿಯಲ್ಲಿ ಭಾರತ 3-1 ರಿಂದ ಟಿ-ಟ್ವೆಂಟಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.
ಎರಡನೇ ಟಿ-ಟ್ವೆಂಟಿ ಪಂದ್ಯ ಡಿಸೆಂಬರ್ 6ರಂದು ನಡೆಯಲಿದೆ.

LEAVE A REPLY

Please enter your comment!
Please enter your name here