ಗೌರವಯುತವಾಗಿ ಬದುಕುವುದು ಸಂವಿಧಾನದ ಮೂಲಭೂತ ಹಕ್ಕು : ಆರ್. ಜೆ. ಸತೀಶ ಸಿಂಗ್

0
912

ಕಲಬುರಗಿ ಡಿ.3: ಪ್ರತಿಯೊಬ್ಬರೂ ಗೌರವಯುತವಾಗಿ ಬದುಕುವುದು ಸಂವಿಧಾನದ ಮೂಲಭೂತ ಹಕ್ಕಾಗಿದೆ ಹೀಗಾಗಿ ವಿಕಲಚೇತನರಿಗೆ ಸಿಗುವ ಎಲ್ಲಾ ಸೌಲಭ್ಯ ಲಭಿಸುವಂತೆ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಅಧ್ಯಕ್ಷ ಆರ್. ಜೆ. ಸತೀಶ ಸಿಂಗ್ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಪ್ರಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ವಿಕಲಚೇತನರಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಹಾಗೂ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಯಕರ್ತರ (ವಿ. ಆರ್.ಡಬ್ಲ್ಯೂ ಮತ್ತು ಎಂ. ಆರ್. ಡಬ್ಲ್ಯೂ)ರವರ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ವಿಕಲಚೇತನರ ದಿನಾಚರಣೆ” ಉದ್ಘಾಟಿಸಿ ಮಾತನಾಡಿದರು.
ನಾವು ಯಾರು ಕೂಡ 100ಕ್ಕೆ 100ರಷ್ಟು ಮಾನಸಿಕವಾಗಿ ಆರೋಗ್ಯಕರವಾಗಿಲ್ಲ, ಮನುಷ್ಯರಿಗೆ ಜ್ವರ ನೆಗಡಿ, ಕೆಮ್ಮು ಬರುವ ಹಾಗೇ ಮೆದುಳಿಗೂ ಸಹ ಜ್ವರ, ನೆಗಡಿ, ಕೆಮ್ಮು ಬರುತ್ತದೆ ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಮಾನಸಿಕ ತಜ್ಞರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಮತ್ತು ಸಾರ್ವಜನಿಕಕರು ಅಧಿಕಾರಿಗಳ ಕಣ್ಣುಗಳಾಗಿ ಕೆಲಸ ಮಾಡಬೇಕು. ಎಲ್ಲಾದರು ಮಾನಸಿಕ ಅಸ್ವಸ್ಥ ವ್ಯಕ್ತಿಗಳು ಕಂಡರೆ ಕೂಡಲೇ ಪೋಲೀಸರ ಸಹಾಯವಾಣಿ 100ಕ್ಕೆ ಕರೆಮಾಡಿ ಮಾಹಿತಿ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನAತರ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ. ಆರ್. ಶೆಟ್ಟರ್ ಅವರು, ಕಾನೂನಿನಲ್ಲಿ ಹಲವಾರು ಬದಲಾವಣೆಗಳಾಗಿವೆ ಅದರಲ್ಲಿ ಅಸ್ತಿ ವಿಚಾರವು ಒಂದು ಗಂಡು-ಹೆಣ್ಣು ಭೇದ ಮರೆತು ಸಮಾನವಾಗಿ ಕಾಣುವುದು ಉಚಿತ. ಗ್ರಾಮೀಣ ಪ್ರದೇಶದ ಹಿರಿಯರಲ್ಲಿ ಬರುವ ಅಸ್ತಿ ಸಮಸ್ಯೆಗಳನ್ನು ಗಂಡು-ಹೆಣ್ಣು ಅಂತ ಭೇದ ಮಾಡದೇ ನ್ಯಾಯ ಮಾಡಿದರೆ ನ್ಯಾಯಾಲಯಕ್ಕೆ ಬರುವ 50% ಕೇಸುಗಳು ನಿಲ್ಲುತ್ತವೆ ಎಂದು ತಿಳಿಸಿದರು.
ಇದೆ ವೇಳೆ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಅರುಣಕುಮಾರ ಬಿ. ಕಣ್ಣಿ ಮಾತನಾಡಿ, ಜನರು ಭಗವದ್ಗೀತಾ, ಬೈಬಲ್, ಕುರಾನ್ ಗಳನ್ನು ಓದುವ ಹಾಗೇ ಪ್ರತಿಮನೆಯಲ್ಲೂ ಭಾರತೀಯ ಸಂವಿಧಾನ ಓದುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜ ಅವರು, ಮುಖ್ಯವಾಗಿ ಇಲ್ಲಿಯವರೆಗೆ ವಿಕಲಚೇತನರ ವಿಭಾಗದಲ್ಲಿ ಮಾಡಿರುವ ಸಾಧನೆಗಳು ಮತ್ತು ಯಶಸ್ಸಿನ ಬಗ್ಗೆ ಸಂಭ್ರಮ ಆಚರಿಸುವ ಕೆಲಸ ಆಗಬೇಕು ಮತ್ತು ಇನ್ನೂ ಮುಂದೆ ಮಾಡಲಿರುವ ಕಾರ್ಯಗಳ ಬಗ್ಗೆಯೂ ಯೋಚಿಸುವ ಕೆಲಸವು ಆಗಬೇಕು. ಏನ್.ಜಿ.ಓ ಸೇವಾ ಮನೋಭಾವದಿಂದ ತಮ್ಮ ಕಾರ್ಯನಿರ್ವಾಹಿಸಬೇಕಾಗಿದೆ ಜವಾಬ್ದಾರಿ ತೆಗೆದುಕೊಂಡು ಧನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಕಲಚೇತರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು. ಮತ್ತು ವಿಕಲಚೇತನರ ವಿವಾಹ ಯೋಜನೆಯಡಿ ಪ್ರೋತ್ಸಾಹ ದನ ವಿತರಣೆ ಮಾಡಿದರು. ಹಾಗೂ ವಿ. ಆರ್. ಡಬ್ಲ್ಯೂ ಮತ್ತು ಎಂ. ಆರ್.ಡಬ್ಲ್ಯೂ ಮರಣ ಪರಿಹಾರ ನಿಧಿಯಿಂದ ಚೆಕ್ ವಿತರಿಸಿದರು. ಇದೆ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ವತಿಯಿಂದ ಮಾಸ್ಕ್ ಮತ್ತು ಸಾಬೂನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿವೃತ್ತ ಜಂಟಿ ನಿರ್ದೇಶಕ ನಾಗಣ್ಣ ಗಾಣಜಲಕೇಡ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಲಬುರಗಿ ಘಟಕದ ಉಪಾಧ್ಯಕ್ಷ ಅರುಣಕುಮಾರ ಗೋಳಾ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಸ್ವಾಗತಿಸಿದರು, ಪ್ರಕಾಶ ಜಾದವ್ ವಂದಿಸಿದರು, ಸರಕಾರಿ ಅಂಧ ಬಾಲಕರ ಶಿಕ್ಷಕರು ನಾಡಗೀತೆ ಹಾಡಿದರು, ರಮೇಶ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here