ಕಲಬುರಗಿ. ಡಿ. 1:ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತಿಗಳ ಪೈಕಿ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ. ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಇನ್ನೀತರ ಕಾರಣದಿಂದ ಕಲಬುರಗಿ ಜಿಲ್ಲೆಯ 19 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸಾö್ನ ಅವರು ತಿಳಿಸಿದ್ದಾರೆ.
ಆಳಂದ ತಾಲೂಕಿನ 16-ಹಾಳತಡಕಲ್, 14-ಢಣ್ಣೂರ, 19-ನೀರಗುಡಿ, 34-ಭೂಸನೂರ, 37-ಹಿತ್ತಲಶಿರೂರ ಹಾಗೂ 38-ಧುತ್ತರಗಾಂವ, ಜೇವರ್ಗಿ ತಾಲೂಕಿನ 09-ಮದರಿ ಹಾಗೂ 20-ರಂಜಣಗಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿಲ್ಲ.
ಅದೇ ರೀತಿ ಚಿತ್ತಾಪುರ ತಾಲೂಕಿನ 20-ಡೊಣಾಗಾಂವ, 25-ಕೋಲ್ಲೂರ, 27-ರಾಂಪೂರಹಳ್ಳಿ, ಚಿಂಚೋಳಿ ತಾಲೂಕಿನ 14-ಕರ್ಚಖೇಡ, 15-ಗರಗಪಳ್ಳಿ, ಕಮಲಾಪುರ ತಾಲೂಕಿನ 03-ಮರಗುತ್ತಿ, 17-ಮುದ್ದಡಗಾ, ಕಾಳಗಿನ ತಾಲೂಕಿನ 11-ಶೇಳ್ಳಗಿ, 16-ಮೋಘಾ, 17-ರುಮ್ಮನಗೂಡ ಹಾಗೂ ಯಡ್ರಾಮಿ ತಾಲೂಕಿನ 06-ಕರಕಿಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿಲ್ಲ.