ಜನತಾ ಬಜಾರ ಚುನಾವಣೆ ಫಲಿತಾಂಶ ಅಧ್ಯಕ್ಷ ಗಾದಿ ಬಿಜೆಪಿ ಪಾಲಿಗೆ?

0
1033

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ನ. 28: 2020-2025 ಐದು ವರ್ಷಗಳ ಅವಧಿಗಾಗಿ ಇಂದು ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 19 ಜನರು ಆಯ್ಕೆಯಾಗಿದ್ದು, ಅದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದಾರೆ.
ಒಟ್ಟು 19 ನಿರ್ದೇಶಕ ಮಂಡಳಿ ಸದಸ್ಯ ಸ್ಥಾನಗಳು ಮತ್ತು ಸರಕಾರದಿಂದ 03 ಜನ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡು ಒಟ್ಟು 22 ಸಂಖ್ಯಾಬಲಕ್ಕೆ ಅಧ್ಯಕ್ಷ ಗಾದಿ ಏರಲು 12 ಮ್ಯಾಜಿಕ ಸಂಖ್ಯೆ ಆಗಿದೆ.
ಈಗಾಗಲೇ ಬಿಜೆಪಿಯಿಂದ 09 ಜನರು ಆಯ್ಕೆಯಾಗಿದ್ದು, ನಾಮನಿರ್ದೇಶನ ಸದಸ್ಯರು 3 ಸೇರಿ ಸಂಖ್ಯೆ 12 ಆಗಲಿದ್ದು, ಕಾಂಗ್ರೆಸ್‌ನ 09 ಜನ ಸದಸ್ಯರು ಹಾಗೂ ಓರ್ವ ಸದಸ್ಯ ಯಾವ ಪಕ್ಷಕ್ಕೂ ಸೇರದ ಅಣವೀರಪ್ಪ ಕಾಳಗಿ ಅವರು ಕೂಡಾ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜನತಾ ಬಜಾರ ಅಧಿಕಾರ ಕಳೆದುಕೊಂಡರೂ ಆಶ್ವರ್ಯಪಡಬೇಕಿನಿಲ್ಲ.

LEAVE A REPLY

Please enter your comment!
Please enter your name here