ಡಿಸಿಸಿ ಬ್ಯಾಂಕ್ ಚುನಾವಣೆ 5 ಜನ ಅವಿರೋಧ ಆಯ್ಕೆ

0
1848

ಕಲಬುರಗಿ, ನ. 21: ಕಲಬುರಗಿ, ಯಾದ ಗಿರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಡೆಯಲಿರುವ ಸಾಮಾನ್ಯ ಆಡಳಿತ ಮಂ ಡಳಿ ಚುನಾವಣೆಯಲ್ಲಿ ನಾಲ್ಕು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.
‘ಎ’ ವರ್ಗದಿಂದ ನಾಮಪತ್ರ ಸಲ್ಲಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಲಬುರಗಿ ಕ್ಷೇತ್ರದಿಂದ ಶರಣಬಸಪ್ಪ ಬಸವಂತರಾಯ ಪಾಟೀಲ್, ಯಾದಗಿರಿ ಯಿಂದ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನರೆಡ್ಡಿ ಕೌಳೂರು, ಸುರಪುರ ತಾಲೂಕಿನಿಂದ ಬಾಪೂಗೌಡ ದುಂಡಪ್ಪಗೌಡ ಮತ್ತು ಸೇಡಂ ತಾಲೂಕಿನಿಂದ ಬಿ. ನಂದಕಿಶೊರರೆಡ್ಡಿ ಜನಾ ರ್ಧನರೆಡ್ಡಿ ಅವರುಗಳೇ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಅಲ್ಲದೇ ಇನ್ನೊಂದು ಅಫಜಲಪುರ ಕ್ಷೇತ್ರದ ಅಭ್ಯರ್ಥಿ ಮಹಾಂ ತಗೌಡ ಸಿದ್ದಣ್ಣಗೌಡ ಪಾಟೀಲ್ ಅವರ ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ.
ಇಂದು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ನಡೆದು ಮೂರು ಜನರ ನಾಮ ಪತ್ರಗಳು ತಿರಸ್ಕೃತಗೊಂಡಿದ್ದು ಅಂತಿಮ ವಾಗಿ ಕಣದಲ್ಲಿ 24 ಅಭ್ಯರ್ಥಿಗಳು ಉಳಿದಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನ ವಾದ ನಿನ್ನೆ ಒಟ್ಟು 27 ಜನರು ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯಲು 23 ಕೊನೆ ಯ ದಿನವಾಗಿದೆ. ಚುನಾವಣೆಯು 29.11.2020ರಂದು ನಡೆಯಲಿದೆ.
ಒಟ್ಟಿನಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ 23ರಂದು ಸಂಜೆ ಅಂತಿಮವಾಗಲಿದೆ.
ಒಟ್ಟು 13 ಕ್ಷೇತ್ರಗಳಿಗೆ ಚುನಾವಣೆ ನಡೆ ಬೇಕಿದ್ದು, ಈಗಾಗಲೇ ನಾಲ್ವರು ಅವಿರೋಧ ವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 9 ಸ್ಥಾ ನಗಳಿಗೆ ಮಾತ್ರ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಕಣದಲ್ಲಿ ಜೇವರ್ಗಿಯಿಂದ ಕೇದಾರಲಿಂ ಗಯ್ಯ ಹಿರೇಮಠ, ಸುರಪುರದಿಂದ ಸುರೇಶ ಸಜ್ಜನ, ಸೋಮಶೇಖರ ಗೋನಾಯಕ, ಸಿದ್ರಾಮರೆಡ್ಡಿ, ಶ್ರೀಮತಿ ಸಾವಿತ್ರಿಬಾಯಿ ಕುಳಗೇರಿ ಸೇರಿದಂತೆ ಒಟ್ಟು 27 ಜನರು ನಾಮಪತ್ರ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here