ಕಲಬುರಗಿ:ನ.13: ಕಳೆದ ಮೂರು ದಿನಗಳ ಹಿಂದೆ ನಗರದ ಎಂ.ಬಿ. ನಗರದ ಮನೆಯೊಂದರಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ನಡೆಯುತ್ತಿದ್ದ ವೇಳೆ ಇಬ್ಬರನ್ನು ವಶಕ್ಕೆ ಪಡೆದಿರುವ ಸೊಲ್ಲಾಪೂರದ ಸಿಸಿಬಿ ಪೋಲಿಸರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಶ್ರೀಮತಿ ಜಯಶ್ರೀ ಮತ್ತಿಮೂಡ್ ಅವರ ಹೆಸರಿನಲ್ಲಿ ಇರುವ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಕಾರಂಜೆ ಎಂಬುವವರಿAದ 38.44 ಲಕ್ಷ ರೂ.ಗಳ ನಗದು, ನಾಲ್ಕು ಲ್ಯಾಪ್‌ಟಾಪ್‌ಗಳು, ಟಿವಿ ವಶಕ್ಕೆ ಪಡೆದಿರುವ ಮಹಾರಾಷ್ಟ್ರದ ಸೊಲ್ಲಾಪೂರದ ಸಿಸಿಬಿ ಪೋಲಿಸರು ಎರಡು ಕಾರುಗಳು ಹಾಗೂ ಒಂದು ಸ್ಕೂಟರ್ ಸಹ ಜಪ್ತಿ ಮಾಡಿಕೊಂಡಿದ್ದಾರೆ.
ಆ ಪೈಕಿ ಕೆಎ-51, ಎಂ.ಪಿ.9955 ನೊಂದಣಿಯ ಕಾರು ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ಶ್ರೀಮತಿ ಜಯಶ್ರೀ ಮತ್ತಿಮೂಡ್ ಅವರ ಹೆಸರಿನಲ್ಲಿದೆ. ಬೆಟ್ಟಿಂ???ನಲ್ಲಿ ಇನ್ನೂ ಹಲವು ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರಕ್ಕೆ ಬಂದಿದ್ದ ಮಹಾರಾಷ್ಟ್ರ ಪೋಲಿಸರು ಕಲಬುರ್ಗಿ ಪೋಲಿಸರ ಗಮನಕ್ಕೆ ಬಾರದಂತೆ ಕ್ಷಿಪ್ರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಸೊಲ್ಲಾಪೂರ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಮೊದಲೆ ಸೋಲಾಪುರದಲ್ಲಿರುವ ಬುಕ್ಕಿಯೊಬ್ಬರು ಈ ಬಗ್ಗೆ ಸುಳಿವು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದ್ದು, ಕಾರ್‌ನ್ನು ಈಗಾಗಲೇ ಸೋಲಾಪುರದಲ್ಲಿಯೇ ಕಾರು ವಶಕ್ಕೆ ಪಡೆದಿರುವ ಬಗ್ಗೆ ಸೋಲಾಪುರ ಪೋಲಿಸರು ಹೇಳಿಕೆಯಾಗಿದ್ದು, ಒಟ್ಟಿನಲ್ಲಿ ಕಲಬುರಗಿ ಪೋಲಿಸರಿಗೆ ಈ ಬಗ್ಗೆ ಏನು ಗೊತ್ತಿಲ್ಲ