ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಹಿನ್ನೆಲೆ: ಗುಲಬರ್ಗಾ ವಿಶ್ವವಿದ್ಯಾಲಯದ ಸುತ್ತ ನಿಷೇಧಾಜ್ಞೆ

0
976

ಕಲಬುರಗಿ.ನ.7:ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ನ. 10ರಂದು ನಡೆಯಲಿರುವುದರಿಂದ ಅಂದು ಕಲಬುರಗಿ ವಿಶ್ವವಿದ್ಯಾಲಯದ ಸುತ್ತಲು ಹಾಗೂ ಮತ ಎಣಿಕೆ ಕೇಂದ್ರದ ಒಳಗಡೆ ಇಂಕ್ ಪೆನ್/ಸ್ಕೆಚ್ ಪೆನ್, ಹರಿತವಾದ ಆಯುಧ, ಸ್ಪೋಟಕ ವಸ್ತುಗಳು, ಮೊಬೈಲ್, ಸಿಗರೇಟ್, ಗುಟಕಾ ಮತ್ತು ನೀರಿನ ಬಾಟಲ್‌ಗಳನ್ನು ತರುವುದನ್ನು ಸಿ.ಆರ್.ಪಿ.ಸಿ ಕಾಯ್ದೆ ಕಲಂ 144 ರನ್ವಯ ನಿಷೇಧಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ ಕಲಬುರಗಿ ನಗರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ದಿನಾಂಕ ನವೆಂಬರ್ 9ರ ಮಧ್ಯರಾತ್ರಿಯಿಂದ ನ. 10ರ ಮಧ್ಯ ರಾತ್ರಿ ವರೆಗೆ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರನ್ವಯ ಎಲ್ಲಾ ತರಹದ ಮದ್ಯ ಮಾರಾಟ ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here