ಕಲಬುರಗಿ:ನ.6: ಸಣ್ಣ ಕಾರಣಕ್ಕಾಗಿ ತಿಂಡಿ ವಿಷಯಕ್ಕೆ ನಡೆದ ಜಗಳ ಕೊನೆಯಲ್ಲಿ ಅಂತ್ಯವಾಗಿದ್ದು ಕೊಲೆಯಲ್ಲಿ, ಈ ಘಟನೆ ನಡೆದಿರುವುದು ಚಿತ್ತಾಪೂರ ತಾಲೂಕಿನ ಹಲಕರ್ಟಿಯಲ್ಲಿ ಗ್ರಾಮದ ಸುರೇಶ ಭೀಮರಾವ್ ವಾಸ್ಟರ್‌ರೇ (58), ಕೊಲೆಯಾದ ದುರ್ದೈವಿಯಾಗಿದ್ದಾರೆ.
ರಾಜಕೋಟನಲ್ಲಿ ಜೋತಿಷ್ಯ ಹೇಳಿಕೊಂಡು ಜೀವನ ನಡೆಸುತ್ತಿದ್ದ, ಸುರೇಶ ಜಮೀನಿನ ವಿಷಯಕ್ಕೆ ಸಂಬAದಿಸಿದ ಹಾಗೇ ಹಲಕರ್ಟಿಗೆ ಇಂದು ಬೆಳಗ್ಗೆಯಷ್ಟೆ ಬಂದು ಸಾಯಂಕಾಲದ ಹೊತ್ತಿಗೆ ಗ್ರಾಮದ ಹೊಟೇಲ್ ನಲ್ಲಿ ಬಜ್ಜಿ ತಿನ್ನುವಾಗ ಕ್ಷುಲಕ ಕಾರಣಕ್ಕೆ ಪಾಶಾ ಹಾಗೂ ಸುರೇಶ ನಡುವೆ ಜಗಳ ನಡೆದು, ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ನೆಲಕ್ಕೆ ತಳ್ಳಿದಾಗ ಕೆಳಗೆ ಬಿದ್ದು ಸುರೇಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಘಟನೆಗೆ ಸಂಬAದಿಸಿದ ಹಾಗೇ ಮಹೆಬೂಬ್ ಅಲ್ಲಿ ಸಯ್ಯದ್ ಪಾಶಾ, ಮೊಹಮ್ಮದ್ ಶಾರುಖ್, ಸೈಯದ್ ಹಾಜರ್,ಸೈಯದ್ ಮಜರ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ವಾಡಿ ಠಾಣೆಯಲ್ಲಿ ದಾಖಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸರು ಬಿಡು ಬಿಟ್ಟಿದಾರೆ

LEAVE A REPLY

Please enter your comment!
Please enter your name here