ಬೈಕ್ ನಡುವೆ ಪರಸ್ಕರ ಡಿಕ್ಕಿ: ನಾಲ್ವರ ಸಾವು ಇಬ್ಬರಿಗೆ ಗಾಯ

0
1005

ಕಲಬುರಗಿ, ಟಿ. 4: ವೇಗವಾಗಿ ಚಲಿಸುತ್ತಿದ್ದ ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಾಯಗಳಾದ ದುರ್ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪೂರ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಎರಡೂ ಬೈಕ್’ಗಳಲ್ಲಿ ತಲಾ ಮೂವರು ಪ್ರಯಾಣಿಸಿದ್ದು, ವೇಗವಾಗಿ ನೇರ ಮುಖಾಮುಖಿ ಅಪಘಾತದ ಜರುಗಿ, ಮೂವರು ಸ್ಥಳದಲ್ಲಿ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವಿಗೀ ಡಾದ್ದಾರೆ.
ಲಾಡ್ಲಾಪುರ ಗ್ರಾಮದ ಮರೆಪ್ಪ (50), ಬಸಪ್ಪ (32) ಮತ್ತು ಅಲ್ಲೂರು ಗ್ರಾಮದ ದೇವೇಂದ್ರ (50) ಹಾಗೂ ಮಲ್ಲಪ್ಪ ರಾಯಪ್ಪ (35) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಉಳಿದ ಹನಮಂತ ಹಾಗೂ ಕಾಶಿನಾಥ ಎಂಬುವರು ಗಂಭೀರ ವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here