ನಗರದ ತಾಜ್ ಸುಲ್ತಾನಪುರಲ್ಲಿ 5 ಜನ ದರೋಡಕೋರರ ಬಂಧನ

0
1799

ಕಲಬುರಗಿ, ನ. 3: ಕಲಬುರಗಿ-ಜಂಬಗಾ (ಬಿ) ಕ್ರಾಸ ಕಡೆಗೆ ಹೋಗುವ ಮುಖ್ಯರಸ್ತೆಗೆ ಇರುವ ತಾಜ ಸುಲ್ತಾನಪುರ ದಲ್ಲಿ ಐದು ಜನ ದರೋಡೆಕೋರರನ್ನು ಪೋಲಿಸರು ಬಂಧಿಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇಂದು (3ರಂದು) ನಗರದ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಮುಂಜಾನೆ ಸಮಯದಲ್ಲಿ ಸಿಮಾಂತರದಲ್ಲಿ ಇರುವ ಗಡ್ಡೆಪ್ಪ ಮುತ್ಯಾನ ಗುಡಿಯ ಮರೆಯಲ್ಲಿ ಕೈಯಲ್ಲಿ ಮಾರಕ ಅಸ್ತçಗಳಾದ ಚಾಕು, ರಾಡು, ಬಡಿಗೆ, ಖಾರದ ಪುಡಿ ಇಟ್ಟುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತ ಬಗ್ಗೆ ಖಚಿತ ಮಾಹಿತಿ ಮೇರೆU ಪೋಲಿಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಕಮೀಷನರ ಎನ್. ಸತೀಶಕುಮಾರ, ಡಿಸಿಪಿ ಡಿ. ಕಿಶೋರಬಾಬು ಶ್ರೀಕಾಂತ ಕಟ್ಟಿಮನಿ, ಡಿ.ಸಿ.ಪಿ. ಅಂಶುಕು ಮಾರ ಎ.ಸಿ.ಪಿ (ಎ) ಉಪವಿಭಾಗ ಕಲಬುರಗಿ ನಗರ ರವರ ಮಾರ್ಗದರ್ಶದಲ್ಲಿ ವಾಹೀದ ಹುಸೇನ ಕೊತ್ವಾಲ್ ಪಿ.ಎಸ್.ಐ ಅಶೋಕ ನಗರ ಪೊಲೀಸ ಕಲಬುರಗಿ ನಗರ ಮತ್ತು ಅವರ ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ತೌಶೀಫ್, ಶ್ರೀಶೈಲ್, ಬೀರಣ್ಣಾ, ಶಿವಾನಂದ, ಗೋಪಾಲ್, ಮಲ್ಲಿಕಾರ್ಜುನ, ಜಾನಿ, ಈರಣ್ಣರವ ರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತರಾದ ಪ್ರಶಾಂತ ಅಲಿಯಾಸ ಪರಶ್ಯಾ ತಂದೆ ರಜನಿಖಾಂತ ಐಗೋಳೆ, ಸಾ. ಬಸವನಗರ, ಕಲಬುರಗಿ, 7ನೇ ಕ್ರಾಸ ತಾರಫೈಲ್, ಅಭಿಷೇಕ ತಂದೆ ಸೋಮಣ್ಣ, ರಾಜೋಳ, ಸಾ. ಸುಂದರನಗರ, ಕಲಬುರಗಿ, ಶಿವಾನಂದ ತಂದೆ ಬಾಬುರಾವ ದಿವಂಟಗಿ ಡಬರಾಬಾದ ಆಶ್ರಯ ಕಾಲೋನಿ, ಚಂದ್ರಾಮ ತಂದೆ ಸಿದ್ದಪ್ಪ ಮ್ಯಾದರ ಸುವರ್ಣಾ ನಗರ, ವಿಜಯ @ ಸಂಜು ರಾಮಚಂದ್ರ ಐಳೋರ, ಫೀಲ್ಟರ್ ಬೆಡ್, ಆಶ್ರಯ ಕಾಲೋನಿ ಇವರುಗಳನ್ನು ಬಂಧಿಸಿ, ಅವರಿಂದ ದರೊಡೆಗೆ ಉಪಯೋಗಿಸಿದ 2 ಚಾಕು, ಒಂದು ಬಡಿಗೆ, ಒಂದು ಖಾರದ ಪಾಕೇಟ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಿರೋ ಹೋಂಡಾ ಮೋಟಾರ್ ಸೈಕಲ್ ಕೆಎ 32, ಎಸ್. 3600 ಜಪ್ತಿ ಮಾಡಿಕೊಂಡು ಆರೋಪಿ ತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರಲ್ಲಿ ಪ್ರಶಾಂತ @ ಪರಶ್ಯಾ ಇತನು ಕುಖ್ಯಾತ ರೌಡಿ ಶೀಟರ್ ನಾಗಿದ್ದು ಅವನ ವಿರುದ್ಧ ಕಲಬುರಗಿ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ದರೋಡೆ, ಸುಲಿಗೆ, ಕೊಲೆ ಪ್ರಯತ್ನದಂತಹ ಒಟ್ಟು 17 ಪ್ರಕರಣಗಳು ದಆಖಲಾಗಿವೆ.

LEAVE A REPLY

Please enter your comment!
Please enter your name here