ಆಬುದಾಬಿ, ನ. 2: ಇಲ್ಲಿನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 2020 ಐಪಿಎಲ್ ಸರಣಿಯ ಕೊನೆಯ ಮೊದಲ ಲೀಗ್ ಪಂದ್ಯದಲ್ಲಿ ವಿರಾಟ್ ನಾಯಕತ್ವದ ಬೆಂಗಳೂರು ರಾಯಲ್ ಚಾಲೆಂರ‍್ಸ ತಂಡವು ನಡೆದ ದೆಹಲಿ ಕ್ಯಾಪಿಟಲ್ ವಿರುದ್ಧ ಸೋಲು ಕಂಡರೂ ಕೂಡಾ ರನ್ ರೆಟ್ ಆಧಾರದ ಮೇಲೆ ಆರ್‌ಸಿಬಿ ತಂಡವು ಪ್ಲೇಆಫ್ ನಲ್ಲಿ 3ನೇ ಸ್ಥಾನ ಪಡೆದಿದೆ. ಪಂದ್ಯ ಗೆದ್ದ ದೆಹಲಿ ಕ್ಯಾಪಿಟಲ್ 2ನೇ ಸ್ಥಾನಕ್ಕೆ ಮತ್ತು ಮುಂಬೈ ಇಂಡಿಯನ್ ತಂಡ ಒಂದನೆ ಸ್ಥಾನದಲ್ಲಿದೆ.
ಇಂದಿನ ಪಂದ್ಯದಿAದ ಸೋಲು ಕಂಡ ಆರ್‌ಸಿಬಿ ಗೆಲುವಿನ ದೆಹಲಿ ಕ್ಯಾಪಿಟಲ್ ಎರಡು ತಂಡಗಳು ಪ್ಲೇಆಫ್ ನಲ್ಲಿ ಸ್ಥಾನ ಪಡೆದಿವೆ. ನಾಲ್ಕು ತಂಡಗಳು ಈ ಐಪಿಎಲ್ ಟೂರ್ನಿಯಲ್ಲಿ ಉಳಿದಿದ್ದು,
ಮೊದಲ ಟಾಸ್ ಗೆದ್ದು ಫಿಲ್ಡಂಗ್ ಆಯ್ದುಕೊಂಡ ದೆಹಲಿ ಕ್ಯಾಪಿಟಲ್ ತಂಡವು ಆರ್‌ಸಿಬಿ ಬ್ಯಾಟ್ಸ್ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 153ರನ್ ಮಾಡಿತ್ತು.
ಆರ್.ಸಿ.ಬಿ. ಪರವಾಗಿ ಎಂದಿನAತೆ ಆಟವಾಡಿದ ದೇವದತ ಪಡಿಕಲ್ ಅವರು (50), ನಾಯಕ ವಿರಾಟ್ ಕೊಹಲಿ 29, ಡೇವಿಲ್ರ‍್ಸ್ 35 ಬಿಟ್ಟರೆ ಕೊನೆಯಲ್ಲಿ ಮಾತ್ರ ಶಿವಮ ದುಬೆ 17 ರನ್ ಹೊಡೆದು ತಂಡದ ಮೊತ್ತ 153ಕ್ಕೆ ಎರಲು ಸಹಾಯ ವಾಯಿತು. ಉಳಿದಂತೆ ಪಂದ್ಯದ್ದಕ್ಕೂ ಯಾವ ಬ್ಯಾಟ್ಸ್ಮನ್‌ಗಳು ಕೈಬಿಚ್ಚಿ ಆಟವಾಡಲು ಸಾಧ್ಯವಾಗದ ಹಾಗೆ ದೆಹಲಿ ಕ್ಯಾಪಿಟಲ್ ಬೌಲರ್‌ಗಳು ಯಶಸ್ವಿಯಾದರು.
ಆರ್‌ಸಿಬಿ ತಂಡದ ಮೊತ್ತ ಬೆನ್ನಟ್ಟಿದ್ದ ದೆಹಲಿ ಕ್ಯಾಪಿಟಲ್ ತಂಡವು ಆರಂಭದಲ್ಲಿ ಒಂದು ವಿಕೆಟ್ ಕಳೆದುಕೊಂಡರೂ ಕೂಡಾ ಶಿಖರ ಧವನ (54) ಹಾಗೂ ಅಂಜೆಕೆ ರಹಾನೆ (60) ರನ್ ಹೊಡೆಯುವ ಮೂಲಕ ಫ್ಲೇಆಪ್ ಪ್ರವೇಶ ಮಾಡಿದರು.
ಇನ್ನು ಒಂದು ಓವರ್ (19) ಇರುವಾಗಲೇ ದೆಹಲಿ ಕ್ಯಾಪಿಟಲ್ ತಂಡವು 6 ವಿಕೆಟ್‌ಗಳಿಂದ ಜಯಗಳಿಸಿ ಫ್ಲೇಆಫ್ ಪ್ರವೇಶ ಪಡೆಯಿತು.