ಕಲಬುರಗಿ ಅ 28 :371 ಕಲಂ (ಜೆ) ಅನುಷ್ಠಾನದಲ್ಲಿ ಆಗುತ್ತಿರುವ ನಿರ್ಲಕ್ಷ ಖಂಡಿಸಿ ನವೆಂಬರ್ 1 ರಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನಡೆಸಲಾಗುವದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ತಿಳಿಸಿ ದ್ದಾರೆ.
ಬಸವಕಲ್ಯಾಣ ಉಪಚುನಾವಣೆಗೆ ಪ್ರತ್ಯೇಕ ರಾಜ್ಯ ಸಮಿತಿ ವತಿಯಿಂದ ಸ್ಪರ್ಧಿಸು ವದಾಗಿ ಅವರು ಹೇಳಿದ್ದಾರೆ.
371 ಜೆ ಕಲಂ ವಿಶೇಷ ಕೋಶ ಇನ್ನೂ ಪ್ರಾರಂಭಿಸಿಲ್ಲ. ಅಲ್ಲದೆ ಥರ್ಮಲ ಪ್ಲಾಂಟ್ 10 ವರ್ಷವಾದರೂ ಇನ್ನೂ ಪ್ರಾರಂ ಭವಾಗಿಲ್ಲ. ಸೋಲಾರ್ ಪಾರ್ಕ್, ಕಲಬುರ್ಗಿ ರೈಲ್ವೆ ವಿಭಾಗವಂತೂ ಕನಸಿನ ಮಾತಾಗಿ ಉಳಿದಿದೆ. ಇಎಸ್ ಐ ಆಸ್ಪತ್ರೆ ಏಮ್ಸ್ ಆಗಿ ಪರಿವರ್ತನೆಯಾಗುವಲ್ಲಿ ವಿಳಂಬ, ರಾಯ ಚೂರು ಐಐಐಟಿ ಹೈದರಾಬಾದ್ ನಲ್ಲಿ ಆರಂಭವಾಗಿದ್ದರೂ ಕೇಳುವವರಿಲ್ಲ. ಕೌಶಲ್ಯ ಅಭಿ ವೃದ್ಧಿ ವಿಶ್ವವಿದ್ಯಾಲಯ ಅನಂತ್ ಕುಮಾರ್ ಹೆಗಡೆ ಸಚಿವರಿದ್ದಾಗ ಘೋಷಿಸಿ ದ್ದರೂ ಇನ್ನೂ ಘೋಷಣೆಯಾಗಿ ಉಳಿ ದಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯ, ಪೊಸ್ಟಿಂಗ್ ನಲ್ಲಿ ಕೂಡ ಅನ್ಯಾಯ ಮುಂದು ವರಿದಿದೆ. ಇವೆಲ್ಲವುಗಳಿಗೆ ಪರಿಹಾರ ಒಂದೇ ಅದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಎಂದು ತಿಳಿದು ನವಂಬರ್ 1ರಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡುವುದು.
ಬಸವಕಲ್ಯಾಣ ಉಪ ಚುನಾವಣೆ ನಂತರ ಕಲಬುರ್ಗಿ ನಗರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೂಡ ಪ್ರತ್ಯೇಕ ರಾಜ್ಯದ ಸಮಿತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಎಂ ಎಸ್ ಪಾಟೀಲ ತಿಳಿಸಿದ್ದಾರೆ