ಕಲಬುರಗಿ, ಅ. 28: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕಲಬುರಗಿ ಹಾಗೂ ದೃಷ್ಟಿ ನೇತ್ರ ಆಸ್ಪತ್ರೆಯ ಸಹಯೋಗದಲ್ಲಿ ನವೆಂಬರ್ 4ರಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 5.00 ಗಂಟೆಯವರೆಗೆ ಉಚಿತ ನೇತೃ ತಪಾಸಣಾ ಹಾಗೂ ಶಸ್ತç ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು, ಕಛೇರಿಯಲ್ಲಿ ಮತ್ತು ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ತಾಲೂಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ಅಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ ಹಾಗೂ ದೇವೆಂದ್ರಪ್ಪ ಅವಂಟಿ ಅವರು ಕೋರಿದ್ದಾರೆ.
ಜಗತ್ ವೃತ್ತದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ನಡೆಯುವ ಈ ನೇತ್ರ ತಪಸಣಾ ಶಿಬರಕ್ಕೆ ಬಂದವರಿಗೆ ಉಚಿತ ತಪಾಸಣೆ ಹಾಗೂ ಕನ್ನಡಕವನ್ನು ನೀಡಲಾಗುವುದು. ಕಣ್ಣಿನ ಪೊರೆ ಬಂದಿದ್ದರೆ ಅಂಥವರಿಗೆ ಉಚಿತವಾಗಿ ಶಸ್ತç ಚಿಕಿತ್ಸೆ ಮಾಡಲಾಗುವುದು.
ಆಸಕ್ತ ಪತ್ರಕರ್ತರು ನವೆಂಬರ್ 2ರ ವರೆಗೆ ತಮ್ಮ ಹೆಸರುಗಳನ್ನು ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2.00ರ ವರೆಗೆ ನೋಂದಾಯಿಸಿಕೊಳ್ಳಬಹುದು.