ಈದ್ ಮಿಲಾದ್ ಹಬ್ಬ: ಸಾಮೂಹಿಕೆ ಮೆರವಣಿಗೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ

0
1435

ಕಲಬುರಗಿ.ಅ.26: ಇದೇ ಅಕ್ಟೋಬರ್ 30 ರಂದು ಮುಸ್ಲಿಂ ಭಾಂಧವರು ರಾಜ್ಯದಾದ್ಯಂತ ಈದ್ ಮಿಲಾದ್ ಹಬ್ಬ ಆಚರಿಸಲಿದ್ದು, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಂದು ಕಲಬುರಗಿ ಜಿಲ್ಲೆಯಾದ್ಯಂತ ಸಾಮೂಹಿಕ ಮೆರವಣಿಗೆ (ಜುಲೂಸ್) ಮಾಡುವುದನ್ನು ಅಥವಾ ತೆರೆದ ಸ್ಥಳದಲ್ಲಿ ಒಂದೆಡೆ ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾö್ನ ಆದೇಶಿಸಿದ್ದಾರೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೋವಿಡ್-19 ಸುರಕ್ಷಾ ಕ್ರಮಗಳ ಪಾಲನೆ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು ಖಬರಸ್ತಾನ್ ಒಳಗೊಂಡAತೆ ಯಾವುದೇ ತರಹದ ತೆರೆದ ಜಾಗದಲ್ಲಿಯೂ ಸಾಮೂಹಿಕ ಪ್ರಾರ್ಥನೆ ಮಾಡುವುದು ಅಥವಾ ಪ್ರವಚನ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು ಮೊಹಲ್ಲಾಗಳಲ್ಲಿಯೂ ಹಗಲು ಮತ್ತು ರಾತ್ರಿ ಯಾವುದೇ ರೀತಿಯ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ-ಸಮಾರಂಭ ಆಯೋಜಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಸೀದಿ-ದರ್ಗಾಗಳಲ್ಲಿ ಅವಕಾಶ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ಕೋವಿಡ್-19 ಸಾಕಷ್ಟು ಸುರಕ್ಷಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. 6 ಅಡಿ ಸಾಮಾಜಿಕ ಅಂತರ ಕಾಪಾಡಲೆಬೇಕು. ಪ್ರವೇಶ ದ್ವಾರದಲ್ಲಿ ಕೈ ತೊಳೆದುಕೊಳ್ಳಲು ಸ್ಯಾನಿಟೈಸರ್ ಅಥವಾ ಸೋಪ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.
ಧ್ವನಿವರ್ಧಕ ಬಳಕೆ ನಿಷೇಧ: ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ/ ಡಿಜಿಟಲ್ ಸೌಂಡ್ (ಡಿಜೆ) ಬಳಕೆಯನ್ನು ನಿಷೇಧಿಸಲಾಗಿದೆ.
ವೃದ್ಧರು, ಮಕ್ಕಳು ಮನೆಯಲ್ಲಿಯೆ ಹಬ್ಬ ಆಚರಿಸಿ: 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೆ ಹಬ್ಬ ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾö್ನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here