ಕಲಬುರಗಿ, ಅ. 24: ಈ ತಿಂಗಳು 28ರಂದು ನಡೆಯಲಿರುವ ಈಶಾನ್ಯ ಕರ್ನಾಟಕ ಶಿಕ್ಷರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗೈ, ಬಿಜಿಪಿ ಮತ್ತು ಜೆ.ಡಿಎಸ್ ಅಭ್ಯರ್ಥಿಗಳ ಮಧ್ಯ ತುರುಸಿನ ಪ್ರಚಾರ ನಡೆದಿದೆ.
ಈಗಾಗಲೇ ಮೂರು ಪಕ್ಷಗಳ ಅಭ್ಯಥಿಗಳು ಈ ಕ್ಷೇತ್ರದ ಕಲಬುರಗಿ, ಬೀದರ, ಬಳ್ಳಾರಿ, ರಾಯಚೂರು, ಕೊಪ್ಪಳ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿನ ಲೆಕ್ಕಾಚಾರ ಹೊರಹಾಕುತ್ತಿದ್ದು, ಎಲ್ಲ ಅಭ್ಯರ್ಥಿಗಳಿಗಿಂತ ಕೊಂಚ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಫುರ್ಲೆ ಅವರ ಪ್ರಚಾರದ ಭರಾಟೆ ಜೋರಾಗಿ ಕಾಣಿಸುತ್ತಿದೆ.
ಎಲ್ಲಡೆ ಶಿಕ್ಷಕ ಮತದಾರರು ಈ ಬಾರಿ ಒಂದು ಸಲ ತಿಮ್ಮಯ್ಯ ಪುರ್ಲೆ ಅವರ ಕಡೆ ವಾಲಿದಂತೆ ಕಾಣುತ್ತಿದ್ದು, ಸರಳ ಹಾಗೂ ಸಜ್ಜನ ಅಭ್ಯರ್ಥಿ ಪುರ್ಲೆ ಪರ ಗಾಳಿ ಬೀಸುತ್ತಿರುವುದು ಮಾತ್ರ ಕಂಡುಬರುತ್ತಿದೆ.
ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಅವರು ತಮಗೆ ತಮ್ಮದೇ ಸರಕಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಇರುವುದರಿಂದ ತಮ್ಮ ಪರವಾಗಿ ಮತದಾರರಿದ್ದಾರೆಂದು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಇತ್ತ ಕಳೆದ ಬಾರಿ ಎಂಎಲ್ಸಿಯಾಗಿ ಆಯ್ಕೆಯಾಗಿರುವ ಶರಣಪ್ಪ ಮಟ್ಟೂರ ಅವರು ತಮಗೆ ಈ ಭಾಗದ ಪ್ರತಿಷ್ಠಿತ ರಾಜಕೀಯ ವ್ಯಕ್ತಿಗಳ ಆಶಿರ್ವಾದ ಇರುವುದರಿಂದ ಅಲ್ಲದೇ ತಾವು ಈಗಾಗಲೇ ಎಲ್ಲ ಶಿಕ್ಷಕ ಮತದಾರರಿಗೆ ಚಿರ ಪರಿಚಿತರಾಗಿದ್ದಲ್ಲೇ, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಅಲ್ಲದೇ ತಮ್ಮಗೆ ಈ ಬಾರಿಯೂ ಮತದಾರರ ಆಶೀರ್ವದಿಸಲಿದ್ದಾರೆಂಬ ಭಾವನೆಯಲ್ಲಿ ತೆಲಾಡುತ್ತಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಯಾರ ಗೆಲವು ಯಾರ ಸೋಲು ನಿರ್ಧರಿಸುವು ನವೆಂಬರ್ 2ರ ರಾತ್ರಿ.