ಎಂಎಲ್ಸಿ ಚುನಾವಣೆ: ನಿಷೇದಾಜ್ಞೆ ಜಾರಿ ಜಿಲ್ಲೆಯಲ್ಲಿ 2 ದಿನ ಮದ್ಯಮಾರಾಟ ನಿಷೇಧ

0
1275

ಕಲಬುರಗಿ, ಅ. 24: ಈಶಾನ್ಯ ಕರ್ನಾಟಕ ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರದಿAದ 5 ಕಿ.ಮೋ. ವ್ಯಾಪ್ತಿವರೆಗೆ ಜಿಲ್ಲೆಯಾದ್ಯಂತ ದಿನಾಂಕ 27ರ ಬೆಳಿಗ್ಗೆ 6.00 ಗಂಟೆಯಿAದ 28.10.2020ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಜಾರಿಮಾಡಿದ್ದಾರೆ.
ಅಲ್ಲದೇ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಲಂ 144 ಜಾರಿ ಮಾಡಿ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿವಿ ಜ್ಯೋತ್ಸಾö್ನ ಅವರು ಆದೇಶ ಹೊರಡಿದ್ದಾರೆ.
ಈಶಾನ್ಯ ಕರ್ನಾಟಕ ಶಿಕ್ಷಕರ ಮಕತ್ಷೇತ್ರದಿಂದ ಇದೇ ತಿಂಗಳು 28ರಂದು ಚುನಾವಣೆಗೆ ಮತದಾನ ನಡೆಯಲಿದ್ದು, ಮತಏಣಿಕೆಯು ಕಲಬುರಗಿ ವಿವಿಯಲ್ಲಿ ನವೆಂಬರ್ 2ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕಲಬುರಗಿ ವಿವಿ ಸುತ್ತಮುತ್ತಲೂ 144ನೇ ಕಲಂ ನಿಷೇದಾಜ್ಞೆ ಮತ್ತು ಮದ್ಯ ಮಾರಾಟವನ್ನು ಕೂಡ ದಿನಾಂಕ 1.11.2020ರ ಮಧ್ಯರಾತ್ರಿಯಿಂದ 2.11.2020ರ ಮಧ್ಯರಾತ್ರಿ ವರೆಗೆ ನಿಷೇಧಿಸಲಾಗಿದೆ.
ನವೆಂಬರ್ 2ರ ಬೆಳಿಗ್ಗೆ 7.00 ಗಂಟೆಯಿAದ ಮತಏಣಕೆ ನಡೆಯುವ ವಿವಿ ಕೇಂದ್ರ ಸುತ್ತಲು 144 ಕಲಂ ಅನ್ವಯ ನಿಷೇದಾಜ್ಞೆ ಹಾಗೂ ಕೇಂದ್ರದ ಒಳಗಡೆ ಇಂಕ್ ಪೆನ್, ಸ್ಕೇಚ್ ಪೇನ್, ಹರಿತವಾದ ಆಯುಧ, ಸ್ಫೋಟಕ ವಸ್ತುಗಳು, ಮೋಬೈಲ್ ಸಿಗರೇಟ್, ಗುಟ್ಕಾ, ನೀರಿನ ಬಾಟಲ್‌ಗಳನ್ನು ಒಯುವುದು ಕೂಡಾ ನಿಷೇಧಿಸಲಾಗಿದೆ.
ಕಲಬುರಗಿ ನಗರ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ ನವೆಂಬರ್ 1ರ ಮಧ್ಯರಾತ್ರಿಯಿಂದ ನವೆಂಬರ್ 2ರ ಮಧ್ಯರಾತ್ರಿ ವರೆಗೆ ಎಲ್ಲ ತರಹದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here