ಹಿರಿಯ ಹೋರಾಟಗಾರ ಮಾನಪಡೆ ಕೊರೊನಾಗೆ ಬಲಿ

0
2336

ಕಲಬುರಗಿ, ಅ. 20: ಕಮ್ಯನಿಷ್ಟ ಪಕ್ಷದ ಹಿರಿಯ ಹೋರಾಟಗಾರ ಹಾಗೂ ರಾಜ್ಯ ಸಿಪಿಐ (ಎಂ) ನ ಮಾರುತಿ ಮಾನಪಡೆ ಅವರು ಇಂದು ವಿಧಿವಶರಾಗಿದ್ದಾರೆಂದು ತಿಳಿಸಲು ವಿಷಾಧವೇನಿಸುತ್ತದೆ.
ಮಾನಪಡೆ ಅವರು ಕೊರೊನಾ ಸೋಂಕಿನಿAದ ಸುಮಾರು 20 ದಿನಗಳಿಂದ ಸೋಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ನಿಧರಾದರು.
ಮೃತರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.
ಕೋವಿಡ್‌ನಿಂದ ಬಳಲಿ ನಂತರ ಗುಣಮುಖರಾಗಿ, ನೆಗೆಟಿವ್ ಆಗಿತ್ತು. ನಂತರ ಅವರಿಗೆ ನಿಮೋನಿಯಾ ಆಗಿ ಅದರಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದು.
ಈ ಹಿಂದೆ ಕಮಲಾಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೇ ಸಲ್ಲಿಸಿದ ಅವರು ಹಲವು ಬಾರಿ ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸಿಪಿಐ ಎಂ ಅಭ್ಯರ್ಥಿಯಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಮೃತರ ಅಂತ್ಯಕ್ರಿಯೆ ಎಲ್ಲಿ ನೆರವೇರಿಸಬೇಕು ಎಂಬ ಬಗ್ಗೆ ಇನ್ನು ನಿರ್ಧಾರ ಕೈಗೊಂಡಿಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ದಿವಂಗತರು ಮೂರು ಗಂಡು, ಓರ್ವ ಹೆಣ್ಣು ಮಗಳು, ಪತ್ನಿ, ತಮ್ಮಿಂದರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಿ ಅಗಲಿದ್ದಾರೆ.
ಅವರ ಅಗಲಿಯಿಂದ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ, ಅವರನ್ನು ಬಿಟ್ಟರೆ ಜಿಲ್ಲೆಯಲ್ಲಿ ಹೋರಾಟ ಮಾಡುವ ಶಕ್ತಿ ತುಂಬವ ವ್ಯಕ್ತಿ ಬೇರೊಬ್ಬರಿಲ್ಲ.
ಸಂತಾಪ :
ಮಾರುತಿ ಮಾನಪಡೆಯವರಂತಹ ಒಬ್ಬ ಧೀಮಂತ ಹೋರಾಟಗಾರರನ್ನು ಕಳೆದುಕೊಂಡAತಾಗಿದೆ ಎಂದು ಮಾಜಿ ಶಾಸಕ ಬಿ. ಆರ್. ಪಾಟೀಲ್ ಅವರು ಸಂತಾಪ ವ್ಯಕ್ತಪಡಿಸಿದ್ದು, ದೇವರು ಆತ್ಮಕ್ಕೆ ಚೀರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here