ಮಾನ್ಪಡೆ ನಿಧನಕ್ಕೆ ಗಣ್ಯರ ಸಂತಾಪ

0
1036

ಕಲಬುರಗಿ, ಅ. 20: ದಿಟ್ಟ ಹೋರಾಟಗಾರ, ಕಮ್ಯುನಿಷ್ಟ ಪಕ್ಷದ ಮುಖಂಡ, ಕಾರ್ಮಿಕ ಮುಖಂಡ ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ನಿಧನದಿಂದ ಈ ಭಾಗದ ಒಬ್ಬ ಧೀಮಂತ ಹೋರಾಟಗಾರರನ್ನು ಕಳೆದುಕೊಂಡAತಾಗಿದೆ ಎಂದು ಮಾನ್ಪಡೆ ಅವರಿಗೆ ಒಂದು ಕಾಲದಲ್ಲಿ ಒಡನಾಡಿಗಳಾಗಿದಂತಹ ಅನೇಕ ನಾಯಕರು, ಮುಖಂಡರು ಹಾಗೂ ಅವರ ಸಹಪಾಠಗಳು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸಿ.ಎ. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂಪ್ರಭುಪಾಟೀಲ, ತಿಪ್ಪಣ್ಣ ಕಮಕನೂರ, ಮಾಜಿ ಸಚಿವರಾದ ಎಸ್.ಕೆ. ಕಾಂತಾ, ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕ ಬಿ.ಆರ್. ಪಾಟೀಲ್, ಸಿಪಿಐ ಧುರೀಣರಾದ ಶರಣಬಸಪ್ಪಾ ಮಮಶೆಟ್ಟಿ, ಭೀಮಶೆಟ್ಟಿ ಯಂಪಳ್ಳಿ, ವಾರ್ತಾ ಇಲಾಖೆಯ ಮಾಜಿ ಉಪ ನಿರ್ದೇಶಕರಾ ಬಸವರಾಜ ಪಾರಾ ಅವರುಗಳು ಸೇರಿದಂತೆ ಅನೇಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೋರಾಟವನ್ನು ಶಾಶ್ವತವಾಗಿ ನಿಲ್ಲಿಸಿದ ಶ್ರೀ ಮಾರುತಿ ಮಾನ್ಪಡೆ ಅವರ ಅಗಲಿಕೆಯಿಂದ ನಮಗೆ, ನಾಡಿಗೆ ತುಂಬಲಾಗದ ನಷ್ಟವಾಗಿದೆ. ಅಂತಹ ಮಹಾನ್ ಹೋರಾಟಗಾರನ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಕಾರ್ಯಕರ್ತರಿಗೆ ದು:ಖ ಸಹಿಸಿಕೊಳ್ಳುವ ಶಕ್ತಿನೀಡಲಿ ಎಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here