ಅ. 21 ರಿಂದ 25ರ ವರಗೆ ನಗರಕ್ಕೆ ಕುಡಿಯುವ ನೀರು ಸರಬರಾಜುವಿಲ್ಲ

0
993

ಕಲಬುರಗಿ ಅ. 20: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲಗಳಾದ ಭೀಮಾ, ಬೆಣ್ಣೆತೋರಾ ನದಿ ಹಾಗೂ ಭೋಸ್ಗಾ ಕೆರೆಯ ಮೇಲ್ಭಾಗದಲ್ಲಿ ಸತತವಾಗಿ ಮಳೆಯಾಗಿ ನದಿಯಲ್ಲಿ ಪ್ರವಾಹ ಬಂದು ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಪಂಪ್‌ಸೆಟ್‌ಗಳನ್ನು ನಿಲುಗಡೆಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಇದೇ ಅಕ್ಟೋಬರ್ 21 ರಿಂದ 25 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊAದಿಗೆ ಸಹಕರಿಸಬೇಕೆಂದು ಕಲಬುರಗಿ ಉಪವಿಭಾಗದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಅದೇ ರೀತಿ ಭೀಮಾ ನದಿಯ ಸರಡಗಿ ಮೂಲ ಸ್ಥಾವರದ ಮೇಲ್ಭಾಗದಲ್ಲಿ ಅತಿಯಾದ ಮಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುಗಡೆಗೊಳಿಸಿದ್ದರಿಂದ ನದಿಗೆ ಪ್ರವಾಹ ಬಂದು ನೀರಿನ ಮಟ್ಟವು ಏರಿಕೆಯಾಗಿರುತ್ತದೆ. ಜಾಕ್‌ವೆಲ್, ಟ್ರಾನ್ಸ್ಫಾರ್ಮರ್ ವಿದ್ಯುತ್ ಉಪಕೇಂದ್ರ ಹಾಗೂ ಪಂಪಿನ ಮನೆಗಳಲ್ಲಿ ನೀರಿನ ಮಟ್ಟವು ಏರಿಕೆಯಾಗಿದ್ದರಿಂದ ಮತ್ತು ಪಂಪಿನ ಮನೆಯಲ್ಲಿರುವ ಕೇಬಲ್ ಟ್ರೆಂಚ್‌ದಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಪಂಪ್‌ಸೆಟ್‌ಗಳನ್ನು ಚಾಲನೆಗೊಳಿಸಲು ಸಾಧ್ಯವಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here