ಕಲಬುರಗಿ, ಅ. 17: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾದಿಂದ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದು, ರೈತರ ನೆರವಿಗೆ ಸರಕಾರ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕೆಂದು ತಾವು ಸೇರಿದಂತೆ ಬಿಜೆಪಿಯ ರೈತ ಮೋರ್ಚಾದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಮಾಡುವುದಾಗಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾದ ಧರ್ಮಣ್ಣ ದೊಡ್ಡಮನಿ ಅವರು ಹೇಳಿದ್ದಾರೆ.
ಈಗಾಗಲೇ ಈ ಕುರಿತಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅವರಿಗೂ ಕೂಡಾ ಮನವರಿಕೆ ಮಾಡಿಕೊಡಲಾಗಿದೆ ಈ ಪ್ರವಾಹದಿಂದಾಗಿ ಶೇ. 60 ರಿಂದ 70%ರಷ್ಟು ರೈತರು ಬೆಳೆದ ಬೆಳಿಗಳಿಗೆ ಹಾನಿಯಾಗಿದ್ದು, ಕೂಡಲೇ ರೈತರ ನೆರವಿಗೆ ಸರಕಾರ ಬರುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಅವರಿಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇಡೀ ದೇಶದಲ್ಲಿ ರೈತರ ಪರವಾಗಿ ಸರಕಾರ ಇರುವುದಾದರೆ ಅದು ಕರ್ನಾಟಕದ ಬಿ.ಎಸ್.ವೈ. ನೇತೃತ್ವದ ಬಿಜೆಪಿ ಸರಕಾರ ಎಂದರು.
ಕೇAದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸಂಬAಧಿತ ಮೂರು ಮಸೂದೆಗಳಾದ ಕೃಷಿ ಮಸೂದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಇವುಗಳಿಂದ ರೈತರಿಗೆ ಅನ್ಯಾಯವಾಗುವುದಿಲ್ಲ, ರೈತರ ಹಿತದೃಷ್ಟಿ ಹಿನ್ನೆಲೆಯಲ್ಲಿ ಈ ಮಸೂದೆ ಜಾರಿಗೆ ತರಲಾಗಿದ್ದು, ವಿರೋಧ ಪಕ್ಷಗಳು ರೈತರಿಗೆ ದಾರಿ ತಪ್ಪಿಸುವ ನಿಟ್ಟಿ ನಲ್ಲಿ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ರೈತರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈಗಾಗಲೇ ಅಕ್ಟೋಬರ್ 10 ರಿಂದ ಆರಂಭವಾದ ರೈತ ಜಾಗೃತಿ ಅಭಿಯಾನದಂಗವಾಗಿ ನಾಳೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೈತಾಪಿ ಜನರಿಗೆ ಈ ಮಸೂದೆ ಬಗ್ಗೆ ಸವಿಸ್ಥಾರವಾಗಿ ಮನವರಿಕೆ ಮಾಡಿಕೊಳ್ಳುವ ಉದ್ದೇಶದ ಪ್ರವಾಸ ಕೈಗೊಳ್ಳಿದ್ದೇನೆ ಎಂದು ಕೂಡಾ ಅವರು ಹೇಳಿದರು.
ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಕಾರಣಕ್ಕೂ ಈಗೀರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಚ್ಚುವುದಿಲ್ಲ ಎಂದು ಹೇಳಿದ ಅವರು ಇದರಿಂದಾಗಿ ರೈತ ಸ್ವತಂತ್ರö್ಯವಾಗಿ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆ ಬಂದಾಗ ಯಾರಿಗೂ ಕೂಡಾ ಮಾರಲು ಅರ್ಹನಾಗಿದ್ದು, ರೈತ ಮಾರುಕಟ್ಟೆ ಹೊರಗಡೆ ಮಾರಾಟ ಮಾಡುವ ಬೆಳೆಗೆ ಎಪಿಎಂಸಿ ಜವಾಬ್ದಾರಿ ತೆಗೆದುಕೊಳ್ಳಲಿದೆ ಎಂದರು.
ಈ ಮಸೂದೆ ಜಾರಿಯಿಂದಾಗಿ ರೈತರ ಆತ್ಮಹತ್ಯೆ ತಡೆಯಬಹುದಾಗಿದ್ದು, ರೈತರ ಕುಟುಂಬಗಳು ಸುಖಕರವಾಗಲಿದ್ದು, ಪ್ರಧಾನಿ ಮೋದಿ ನೇತೃತ್ವದ ಸರಕಾರ ಈ ಮಸೂದೆ ಯಿಂದ ಕೃಷಿ ಕ್ಷೇತ್ರದ ಏಳಿಗೆಗೆ ನಾಂದಿಯಾಗುತ್ತಿದ್ದು, ಜೊತೆಗೆ ದೇಶದ ಜಿಡಿಪಿ ದರ ಶೇ. 15%ರಷ್ಟು ಕೊಡುಗೆ ನೀಡುವ ಕ್ಷೇತ್ರದಲ್ಲಿ ಉದ್ಯೋಗಗಳ ಸೃಷಿಗೆ ಮುನ್ಸೂಚನೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಗ್ರಾಮಾಂತರ ಅಧ್ಯಕ್ಷರಾದ ರಮೇಶ ಧುತ್ತರಗಿ, ರೈತ ಮೋರ್ಚಾ ನಗರಾಧ್ಯಕ್ಷರಾದ ಪ್ರಕಾಶ ಪಾಟೀಲ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾದ ರಾಘವೇಂದ್ರ ಕುಲಕರ್ಣಿ, ಶ್ರೀಶೈಲ್ ಪಾಟೀಲ್, ಬಿಜೆಪಿ ಮುಖಂಡರಾಧ ಗಿರೀಶ ಭಜಂತ್ರಿ ಮತ್ತು ಮಲ್ಲಿನಾಥ ಪಾಟೀಲ್ ಕಾಳಗಿ ಅವರುಗಳು ಉಪಸ್ಥಿತರಿದ್ದರು.
Home Featured Kalaburagi ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಲು ರೈತ ಮೋರ್ಚಾ ನಿಯೋಗದಿಂದ ಸಿಎಂ...