ಕಟ್ಟಿ ಸಂಗಾವಿ ಭೀಮಾ ಬ್ರೀಜ್ ಮೇಲೆ ವಾಹನ ಸಂಚಾರಕ್ಕೆ ತಡೆ: ಕಲಬುರಗಿ,-ವಿಜಯಪುರ ಸಂಪರ್ಕ ‌ಕಡಿತ

0
1244

ಕಲಬುರಗಿ: ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ ಗುರುವಾರ ಬೆಳಿಗ್ಗೆ 2.23 ಲಕ್ಷ ‌ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಬಳಿಯ ಸೇತುವೆ ಮೇಲೆ ನೀರು ಹರಿಯುವ ಸಂಭವವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಇದರಿಂದಾಗಿ ಕಲಬುರಗಿ ವಿಜಯಪುರ ಮಧ್ಯದ ಸಂಪರ್ಕ ಕಡಿತಗೊಂಡಿದೆ. ಸೇತುವೆ ಬಂದ್ ಮಾಡುವ ಮುನ್ಸೂಚನೆ ಇರದೇ ಸೇತುವೆ ಬಳಿ ಬಂದ ಸಾರಿಗೆ ಸಂಸ್ಥೆ ಬಸ್ ಗಳು ಹಾಗೂ ಖಾಸಗಿ ವಾಹನಗಳು ಎರಡೂ ಬದಿ ಕಿಲೋಮೀಟರ್ ಗಟ್ಟಲೇ ನಿಂತಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇತುವೆ ಬಳಿ ಬರದಂತೆ ಧ್ವನಿವರ್ಧಕದ ಮೂಲಕ ಕೂಗಿ ಹೇಳುತ್ತಿದ್ದಾರೆ.
ಜೇವರ್ಗಿ ಶಾಸಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here