ಕಲಬುರಗಿ, ಅ. 14: ನಗರದ ವಿವಿಧ ಕಡೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದ ಮೂವರು ಕುಖ್ಯಾತ ಕಳ್ಳರನ್ನು ಸ್ಟೇಷನ್ ಬಜಾರ ಪೊಲೀಸರು ಬಂಧಿಸಿದ್ದಾರೆ.
ಬAಧಿತರಿAದ 2.5 ಲಕ್ಷ ಮೌಲ್ಯದ ಬೈಕ್‌ಗಳನ್ನು ಹಾಗೂ ಮೊಬೈಲ್ ವಶಪಡಿಸಿಕೊಂಡು, ಸುಲಿಗೆಕೋರರಾದ ಮೊಮಿನ್‌ಪುರದ ಜಮೀರ್ ಇನಾಯತ್ (20), ಎಂಬಿ ನಗರದ ಅಜಯ ಶರಣಪ್ಪ (19) ಹಾಗೂ ಮೆಹಬೂಬ ನಗರದ ಆಕಾಶ ಭೀಮಾಶಂಕರ ಎಂಬುವರನ್ನು ಬಂಧಿಸಿದ್ದಾರೆ.
ನೊಬೆಲ್ ಶಾಲೆಯ ಬಳಿಯಲ್ಲಿ ನಡೆದ ಸುಲಿಗೆ ಪ್ರಕರಣ ಪತ್ತೆ ಮಾಡಲು ರಚಿಸಲಾಗಿದ್ದ ವಿಶೇಷ ತಂಡದವರು ಎ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಂಶುಕುಮಾರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸಿದ್ದರಾಮೇಶ್ವರ ಗಡದ ಹಾಗೂ ಸಿಬ್ಬಂದಿ ಕೂಡಿಕೊಂಡು ಪೊಲೀಸ್ ಆಯುಕ್ತ ಸತೀಶಕುಮಾರ, ಡಿಸಿಪಿಗಳಾದ ಕಿಶೋರಬಾಬು ಮತ್ತು ಶ್ರೀಕಾಂತ ಕಟ್ಟಿಮನಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ.
ಬಂಧಿತರಿAದ 8 ಬೈಕ್‌ಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಜುಮುದ್ದೀನ್, ಜೈಭೀಮ, ದೇವೇಂದ್ರ, ಮಲ್ಲನಗೌಡ, ಭೋಗೇಶ, ಫಿರೋಜ್, ಮೋಹಸಿನ್ ಇತರರು ಕೂಡಿಕೊಡು ದಾಳಿ ನಡೆಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here