ಸೂಕ್ಷ್ಮ ನೀರಾವರಿ ಪದ್ಧತಿ ವಿತರಕರ ಬಿಲ್‌ಗಳ ರದ್ದತಿ ವಿರುದ್ಧ ಪ್ರತಿಭಟನೆ

0
924

ಕಲಬುರಗಿ, ಅ. 12: ಕರ್ನಾಟಕ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯ ಅನುಷ್ಟ್ಟಾನದಲ್ಲಿ ಏಕಾಏಕಿ ವಿತರಕರ ಬಿಲ್ಲುಗಳನ್ನು ರದ್ದುಪಡಿಸಿದ ಸರಕಾರದ ಕ್ರಮದ ವಿರುದ್ಧ ಸೋಮವಾರ ಕಲಬುರಗಿ ಜಿಲ್ಲಾ ಸೂಕ್ಷö್ಮ ನೀರಾವತಿ ವಿತರಕರ ಸಂಘವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
1991 ರಿಂದ ರೈತರಿಗಾಗಿ ಕರ್ನಾಟಕ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೆ ಬಂದಾಗಿನಿAದ ವಿತರಕರಾದ ನಾವು ಈ ಕಾರ್ಯಕ್ರಮ ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಗಲಿರಳು ಎನ್ನದೆ ಇಲಾಖೆಯವರೊಂದಿಗೆ ಕೂಡಿಕೊಂಡು ಶ್ರಮಿಸಿದ್ದೇವೆ. ಹಾಗೂ ಇದರಲ್ಲಿಯೇ ನಮ್ಮ ಭವಿಷ್ಯ ಕಾಣತ್ತಾ ದುಡಿಯುತ್ತಿದ್ದೇವೆ ಎಂದು ಜಿಲ್ಲಾ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದೀರ ಮತ್ತು ಹಣಮಂತ ಬಿ. ಅವರು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಮಾನ್ಯತೆ ಪಡೆದು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ಸೂಕ್ಷö್ಮ ನೀರಾವತಿ ಪದ್ದತಿಯನ್ನು ಅಚ್ಚುಕಟ್ಟಾಗಿ ರೈತರಿಗೆ ತಲುಪಿಸುವಲ್ಲಿ ಹಾಗೂ ರೈತರ ಆರ್ಥಿಕ ಮಟ್ಟದ ಉನ್ನತೀಕರಣದಲ್ಲಿ ಮಹತ್ತರವಾದ “ಪಾತ್ರವನ್ನು ವಹಿಸುತ್ತಿದ್ದ ಮಾನ್ಯತೆ ಪಡೆದ ಸುಮಾರು 4000 ವಿತರಕರು ಸ್ವಉದ್ಯೋಗ ಕಂಡುಕೊAಡಿದ್ದಾರಲ್ಲದೆ ಸುಮಾರು 1 ಲಕ್ಷಾ ಜನರಿಗೆ ಉದ್ಯೋಗವನ್ನು ಸಹ ಕಲ್ಪಿಸಲಾಗಿದ್ದು, ಇವರೆಲ್ಲರೂ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದರು.
ಈ ಹೊಸ ಮಾರ್ಗಸೂಚಿಯಿಂದ ಸುಮಾರು 8 ಲಕ್ಷಾÀ ಜನ ಉದ್ಯೋಗ ಕಳೆದುಕೊಳ್ಳಲಿದ್ದು ಅವರ
ಕುಟುಂಬಗಳು ಬೀದಿಪಾಲಾವುದನ್ನು ತಪ್ಪಿಸಲು ತಾವು ಮಧ್ಯಸ್ಥಿಕೆ ವಹಿಸಿ, ಇಲಾಖೆಯವರಿಗೆ ಈ ಆದೇಶವನ್ನು ಹಿಂಪಡೆದು ವಿತರಕರ ಬಿಲ್ಲುಗಳನ್ನು ಪರಿಗಣಿಸುವುದು “ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿ ರೈತ ಕೇವಲ ತನ್ನ ವಂತಿಗೆ ಮಾತ್ರ ಭರಿಸಿದ್ದಲ್ಲಿ ಮಾತ್ರ ವಿತರಕರಿಗೆ ‘ಸಹಾಯಧನ ಹಣ ಸಂದಾಯವಾಗುವAತೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಮನವಿಯಲ್ಲಿ ವಿನಂತಿಸಿಕೊAಡಿದ್ದಾರೆ.

LEAVE A REPLY

Please enter your comment!
Please enter your name here