ಕಲಬುರಗಿ, ಅ. 12: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸೇಡಂ ತಾಲೂಕಿನ ಮಳಖೇಡದ ಸೇತುವೆ ಪೂರ್ತಿಯಾಗಿ ತುಂಬಿ ಸಂಜೆ 4.30 ರಿಂದ ಯಾವುದೇ ವಾಹನಗಳ ಸಂಚಾರ ಹಾಗೂ ಜನರ ಓಡಾಡವನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಸೇಡಂ ತಹಸೀಲ್ದಾರರಾದ ಬಸವರಾಜ ಬೆಣ್ಣೆಶಿರೂರ ಅವರು ತಿಳಿಸಿದ್ದಾರೆ.
ಸೇಡಂ ತಾಲೂಕಿನ ಮಳಖೇಡ ಸೇತುವೆಯಂತೂ ಸಂಪೂರ್ಣ ಮುಳುಗಡೆಯಾಗಿದ್ದು, ಜನರು ಕಲಬುರಗಿಯಿಂದ ಸೇಡಂ ಕಡೆ ಹೋಗಲು ಪರದಾಡುತ್ತಿದ್ದು, ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದ್ದು, ಅಪಾಯದ ಸೂಚನೆ ನೀಡುತ್ತಿದ್ದು, ಯಾರೂ ಆ ಕಡೆಯಿಂದ ಈ ಕಡೆಯಿಂದ ಬರಬೇಡಿ ಎಂದು ಸೇಡಂ ತಹಸೀಲ್ದಾರರು ಮನವಿ ಮಾಡಿಕೊಂಡಿದ್ದಾರೆ.
ರವಿವಾರ ಮಧ್ಯರಾತ್ರಿಯಿಂದ ಸೋಮವಾರ ಸಂಜೆ 5ರ ವರೆಗೆ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಮಳಖೇಡದ ಬ್ರಿಡ್ಜ್ ಮೇಲೆ ನೀರು ಹರಿಯಲಿರಾಂಭಿಸಿದ್ದರಿAದ ಸಂಜೆಯಿAದ ಬ್ರಿಡ್ಜ್ ಮತ್ತೆ ಮುಳುಗಡೆಯಾಗಿದ್ದು, ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಭೀಕರ ಮಳೆಯಿಂದ ತಾಲೂಕಿನ ಮಳಖೇಡ ಸ್ಟೇಷನ್ ತಾಂಡಾ, ಮದನಾ, ತೋಟ್ನಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರಸ್ತೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟ ಎದುರಿಸು ವಂತಾಗಿದೆ.ಸೇಡAನ ಕಮಲಾವತಿ ನದಿ ಸೇರಿದಂತೆ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೃಷಿ ಜಮೀನುಗಳಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿ ಬೆಳೆ ನಷ್ಟ ಉಂಟಾಗಿದೆ.