ಕಲಬುರಗಿ, ಅ. 10: ನಗರದ ಪೊಲೀಸ ಆಯುಕ್ತಾಲಯದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ದಿನಾಂಕ: 10.10.2020 ರಂದು ಬೆಳಗ್ಗೆ 3. ಗಂಟೆಗೆ ಶಹಾಬಾದ ಕಲಬುರಗಿ ರಸ್ತೆ ಹತ್ತಿರುವ ಇರುವ ಜ್ಯೋತಿ ನಗರ ಲೇಔಟದ ಬ್ರೀಡ್ಡಯೊಂದರ ಹತ್ತಿರ ಯಾರೋ ಕೆಲವು ಜನರು ಮುಖಕ್ಕೆ ಬಟ್ಟಿ ಕಟ್ಟಿಕೊಂಡು ದರೊಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಶಹಾಬಾದ ಕಲಬುರಗಿ ಕಡೆಗೆ ಮೋಟಾರ ಸೈಕಲಗಳ ಮೇಲೆ “ಹೋಗಿ ಬರುವ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ಅವರಿಗೆ ಮಾರಾಕಾಕಾಸ್ತ್ರ ಗಳನ್ನು ತೋರಿಸಿ ಬೆದರಿಕೆ ಹಾಕಿ, ದರೋಡೆ ಮಾಡಲು ಹೊಂಜು ಹಾಕುತ್ತಿ ಮಾಹಿತಿ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಪಿ.ಐ. ಶಿವಾನಂದ ಘಾಣಗೇರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ ಕಾನೂನು ಸುಧಾರಣೆಯ ಉಪ ಆಯುಕ್ತರು ಕಿಶೋರಬಾಬು, ಕಲಬುರಗಿ ಅಪರಾಧ ವಿಭಾಗದ ಸಹಾಯಕ ಪೊಲೀಸ ಆಯುಕ್ತರು “ಸಿ” ಉಪವಿಭಾಗ ಕಲಬುರಗಿ ಹಾಗೂ ಸಹಾಯಕ ಪೊಲೀಸ ಆಯುಕ್ತರು “ಎ” ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದ ಮೇರೆಗೆ ಈ ದಾಳಿ ನಡೆಸಲಾಗಿದೆ.
ಆಕಾಶ ತಂದೆ ಮಲ್ಲಿಕಾರ್ಜುನ ರಾಯಕೊಡ ವಯ: 22 ವರ್ಷ ಉ: ಅಶೋಕ ಲಿಯೋನೋ ಲಾಡ್ಜದಲ್ಲಿ ವೇಟರ ಕೆಲಸ ಜಾತಿ ಲಿಂಗಾಯಿತ ಸಾ:ರಾಜಾಪೂರ 2) ರೇವಣಸಿದ್ದ ತಂದೆ ವಿಶ್ವನಾಥ ಸರಡಗಿ ವಯ:22 ವರ್ಷ ಉ: ಎಲೆ ಲೆಕ್ಟಿಷಿಯನ್ ಕೆಲಸ ಜಾತಿ: ಲಿಂಗಾಯಿತ ಸಾ: ಮೇಳಕುಂದಾ (ಬಿ) ಹಾ:ವ: ರಾಜಾಪೂರ 3) ಪ್ರಶಾಂತ 2), ಪರಶುರಾಮ ತಂದೆ ಹಣಮಂತ ನಡುವಿನಮನಿ ವಯಃ17 ವರ್ಷ ಉ:ಕಾಜಲ್ ವೈನ ಶಾಪದಲ್ಲಿ ವೇಟರ ಕೆಲಸ ಜಾತಿ: ವಡ್ಡರ ಸಾ: ಪೂರ 34), ಹಣಮಂತ ತಂದೆ ಮಲ್ಲಪ್ಪಾ ಮೇಳಕುಂದಿ ವಯಃ19 ವರ್ಷ ಉ:ಕೂಲಿ ಕೆಲಸ ಜಾತಿ: ಮಾದಿಗಾ ಸಾ: ರಾಜಾಪೂರ 5), ಸಚೀನ ತಂದೆ ಹೊನ್ನಪ್ಪಾ ಕಟ್ಟಿ ವಯ:18 ವರ್ಷ ಉ:ಕೂಲಿ ಕೆಲಸ ಜಾತಿ: ಹೊಲೆಯ (ಎಸ್.ಸಿ) ಸಾ: ಸರ್ವೋದಯ ನಗರ ರಾಜಾಪೂರ ಅಂತಾ ಸಿಕ್ಕಿ ಬಿದ್ದಿದ್ದು ಇವರ ಗುಂಪಿನ ಮುಖ್ಯಸ್ಥನಾದ ರಾಹುಲ ತಂದೆ ಅಶೋಕ ಹೊನ್ನಳ್ಳಿ ಎಂಬಾತನು ಓಡಿ ಹೋಗಿರುತ್ತಾನೆ.
ಆರೋಪಿತರು ಕೃತ್ಯಕ್ಕೆ ಬಳಸಿದ 6 ಕಪ್ಪು ಬಣ್ಣದ ಮಾಸ್ಕಗಳು, ಖಾರದ ಪುಡಿ ಪಾಕೇಟಗಳು, ಅವರ ಕೈಯಲ್ಲಿದ್ದ ಒಂದು ತಲವಾರ, ಒಂದು ಜಂಬ್ಯಾ , ಎರಡು ಬಿದರಿನ ಬಡಿಗೆಗಳು ಹಾಗೂ ಕಾರಿನಲ್ಲಿದ್ದ ಸುಮಾರು 10 ಬಿದುರಿನ ಬಡಿಗೆಗಳು ಹೀಗೆ ಒಟ್ಟು 12 ಬಿದುರಿನ ಬಡಿಗೆಗಳಿದ್ದು ಹಾಗೂ ಅಂದಾಜು 15 ಫೀಟ ಉದ್ದನೆಯ ಪ್ಲಾಸ್ಟಿಕ ಹಗ್ಗ , ಒಂದು ಕಪ್ಪು ಬಣ್ಣದ ನಂಬರ ಫ್ಲೇಟ ಇರದ ಪಲ್ಲರ ಮೋಟಾರ ಸೈಕಲ ಮತ್ತು ಕಾರು ನಂಬರ ಎಮ್‌ಹೆಚ್-04/ಸಿಜೆ-9678 ನೆದ್ದವುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.
ಬಂಧಿತ ಎಲ್ಲ 5 ಜನ ಆರೋಪಿತರನ್ನು ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಅರೋಪಿ ರಾಹುಲ ಹೊನ್ನಳ್ಳಿ ಪತ್ತೆ ಗೆ ಜಾಲ ಬೀಸಿದ್ದಾರೆ.