ಕಲಬುರಗಿ, ಅ. 7: ನಗರದಲ್ಲಿ ಬೆಳ್ಳೆಂಬೆಳಗೆ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರಿಂದ ಪೈರಿಂಗ್ ನಡೆದಿದ್ದು, ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.
ನಗರದ ಹೊರವಲಯದ ಸುಲ್ತಾನಪುರ ಬಳಿ ಮೆಹಬೂಬ್ ನಗರದ ನಿವಾಸಿ ಮುಬೀನ್ (22) ಮೇಲೆ ಪೈರಿಂಗ್ ನಡೆದಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ ಮುಬೀನ್ ಕಾಲಿಗೆ ಆತ್ಮರಕ್ಷಣೆಗಾಗಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಸೋಮಲಿಂಗ್‌ರಿAದ ಗುಂಡುಹಾರಿಸಿ ಗಾಯಗೊಳಿಸಿದ್ದಾರೆ.
ಈ ಹಿಂದೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ದರೋಡೆ ಮಾಡಿದ್ದ ಮುಬೀನ್ ಕಳೆದ ರಾತ್ರಿ ಪೊಲೀಸರ ಕೈಗೆ ಸಿಕ್ಕಿದ್ದದ್ದು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಇಂದು ಮುಂಜಾನೆ ಸುಲ್ತಾನಪುರಕ್ಕೆ ಕರೆದೋಯ್ದಿದ್ದ ಸಂದರ್ಭದಲ್ಲಿ ಪೋಲಿಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಸಿದ ಹಿನ್ನೆಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರುಗಳು ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲುಮಾಡಲಾಗಿದ್ದು, ಗಾಯಾಳು ಮುಬೀನ್‌ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.