ಕಲಬುರಗಿ, ಅ. 6: ಕೇಂದ್ರ ಸರಕಾರವು ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯಿಂದ ದೇಶದ ರೈತರಿಗೆ ಬೆಳೆವಿಮೆ ಪರಿಹಾರ ನೀಡುವದನ್ನು ಘೋಷಿಸಿ ಕರ್ನಾಟಕದಲ್ಲಿ ಒಟ್ಟು 5 ಖಾಸಗಿ ಕಂಪನಿಗಳಿಗೆ ಏಜನ್ಸಿ ಕೊಡಲಾಗಿದ್ದು ನಮ್ಮ ಕಲಬುರಗಿ ಜಿಲ್ಲೆಗೆ ಇನರ್ವಸಿಲ್ ಸೋಂಪ್ ಜನರಲ್ ಇನ್ನೂರನ್ಸ್ ಕಂಪನಿ ಲಿಮಿಟೆಡ್ ನೀಡಲಾಗಿದೆ. ಇವುಗಳಿಂದ ರೈತರಿಗೆ ಲಾಭ ವಾಗದೇ ಕಂಪನಿಗಳೆ ಹೆಚ್ಚು ಲಾಭ ಗಳಿಸುತ್ತಿದ್ದು ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕ ಬಿ. ಆರ್. ಪಾಟೀಲ್ ಅವರು ಇಂದಿಲಿ ಆರೋಪಿಸಿದರು.
ಈ ಖಾಸಗಿ ವಿಮೆ ಕಂಪನಿಗಳಿಗೆ ಜವಾಬ್ದಾರಿ ಕೊಟ್ಟರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಬದಲಾಗಿ ವಿಮೆ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ ಇದಾಗಿದೆ ಎಂದು ಈ `ಹಿಂದೆ ವಿಜಯಪೂರಕ್ಕೆ ಬಂದಿದ್ದ ಹೋರಾಟಗಾರ್ತಿ ಮೇಧಾ ಪಾಟ್ಕರ ಅನು ಮಾನ ವ್ಯಕ್ತಪಡಿಸಿ ಆರೋಪ ಮಾಡಿದರು.
ಅನೇಕ ಸಂಘ ಸಂಸ್ಥೆಗಳು. ನಮ್ಮಂಥ ರಾಜ ಕೀಯ ಮುಖಂಡರುಗಳು ಹೇಳಿಕೆ ನಿಜವಿರುತ್ತದೆ. ಯಾವುದೇ ಖಾಸಗಿ ಕಂಪನಿಗಳು ಬಂದರೆ ಅವರಿಗೆ ಸೇವಾ ಮನೋಭಾವನೆಗಿಂAತ ಲಾಭಗಳಿಕೆಯೇ ಮುಖ್ಯ ಉದ್ದೇಶವಾಗಿರುತ್ತದೆ.
ಈ ಖಾಸಗಿ ಕಂಪನಿಗಳು ಅವೈಜ್ಞಾನಿಕ ಹಾಗೂ ವಾಸ್ತವಕತೆ ಆಧಾರದ ಮೇಲೆ ಸಮೀಕ್ಷೆ ಮಾಡಿಕೊಳ್ಳುತ್ತಿಲ್ಲ ಉದಾ ಒಬ್ಬ ರೈತನು 5 ರಿಂದ 10 ಎಕರೆ ಜಮೀನಿನಲ್ಲಿ ತೊಗರಿ ಬೆಳೆಯ ಪ್ರಿಮಿಯಂ “ಕಟ್ಟಿರುತ್ತಾನೆ. ಆದರೆ ಸಮೀಕ್ಷೆಯಲ್ಲಿ ಪೂರ್ತಿ ಆ ಭೂಮಿಯಲ್ಲಿ ಬೆಳೆ ಇದ್ದರು ಶೇ 50 ರಷ್ಟು ಮಿಶ್ರತಳಿ ಅಂದರೆ ಉದ್ದು, “ಹೆಸರು, ಎಳ್ಳು, ಸಜ್ಜೆ, ಸೋಯಾಬಿನ್ ಇದನ್ನು ದಾಖ ಖಲೆಯಲ್ಲಿ ತಪ್ಪು ಮಾಹಿತಿ ದಾಖಲಿಸಿರುತ್ತಾರೆ. ಈ ಹಿಂದೆÀ ಸಮೀಕ್ಷೆ ಸುವಸ್ತುಸ್ಥಿತಿ ಒಂದು ತರಹ ಇತ್ತು. ನಿರಂತರ ಮಳೆ “ಬಂದು ಈಗ ಪೂರ್ಣ ಚಿಳೆ ಹಾಳಾಗಿವೆ ಆದರೆ ದಾಖಲಾತಿಯಲ್ಲಿ ಶೇ 50 ರಷ್ಟು ಹಾನಿಯಾಗಿದೆ ಎಂದು ನಮೂದಿಸುತ್ತಾರೆ.
ಈಗಾಗಲೇ ಸರಕಾರ ಕೂಡ ಈ ಬಾರಿ ಹಿಂದಿಗಿAತಲೂ ಹೆಚ್ಚು ಮಳೆಯಾಗಿದ್ದರಿಂದ ಅತೀವೃಷ್ಟಿಯುಂಟಾಗಿದೆ ಎಂದು ಸರಕಾರವೇ ಹೇಳಿದೆ. ಅಂತಹದರಲ್ಲಿ ಖಾಸಗಿ ಕಂಪನಿಗಳು ರೈತರನ್ನು ವಿಮೆ ಹೆಸರಿನಲ್ಲಿ ಲೂಟಿ ಮಾಡುತ್ತಿವೆ ಎಂದರು.