ಕಲಬುರಗಿ, ಅ. 3: ರಸ್ತೆ ಬದಿ ಪಾದಚಾರಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಆಕ್ರಮಿಸಿದ ಫುಟ್‌ಪಾತ್‌ನ್ನು ತೆರವುಗೊಳಿಸಲು ಸ್ವತಃ ಮಹಾನಗರಪಾಲಿಕೆ ಆಯುಕ್ತ ಸ್ನೇಹಾಲ್ ಲೋಖಂಡೆ ಅವರೆ ಫೀಲ್ಡಿಗಿಳಿಯಬೇಕಾಯಿತು.
ಮುಖ್ಯರಸ್ತೆಯ ರಸ್ತೆ ಬದಿಯ ಅಂಗಡಿಗಳ ಮುಂದೆ ಸಾಮಾನುಗಳು, ಅಂಗಡಿ ಪ್ರಚಾರದ ಬೋರ್ಡ್ಗಳು ತೆರವುಗೊಳಿಸಿದಲ್ಲದೆ ವ್ಯಾಪಾರ ವಹಿವಾಟಿನ ಲೈಸೆನ್ಸ್ ಇಲ್ಲದ ಅಂಗಡಿಗಳಿಗೆ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪ ಆಯುಕ್ತ ಆರ್.ಪಿ. ಜಾಧವ, ವಲಯ ಆಯುಕ್ತ ಹಾಗೂ ಆರೋಗ್ಯಾಧಿಕಾರಿ ಡಾ. ವಿನೋದಕುಮಾರ ಸೇರಿದಂತೆ ಪಾಲಿಕೆಯ ಕಂದಾಯ ನಿರೀಕ್ಷಕರು, ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದ್ದರು.
ಒಂದೇ ದಿನ ಈ ರೀತಿಯ ಅಕ್ರಮಣದ ತೆರವು ಮಾಡಿದ್ದರೆ ಸಾಕಾಗುವುದಿಲ್ಲ, ರಸ್ತೆ ಬದಿಯ ಅಕ್ರಮಣ ತೆರವಿಗೆ ಆಯಾ ಭಾಗದ ಕಂದಾಯ ನಿರೀಕ್ಷಕರುಗಳು ಆಗ್ಗಿದ್ದಾಂಗೆ ಆಯಾ ಪ್ರದೇಶಗಳಿಗೆ ಭೇಟಿ ನೀಡಿದರೆ ಮಾತ್ರ ರಸ್ತೆಯಲ್ಲಿ ಸಾರ್ವಜನಿಕರು ಫುಟ್‌ಪಾತ ಮೇಲೆ ನಡೆಯಲು ಅನುವು ಆಗುವುದು.