ಆಬುದಬಿ, ಅ. 1: ಇಲ್ಲಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಇಂಡಿ ಯನ್ ಪ್ರೀಮಿಯರ್ ಲೀಗ್‌ನ 13ನೇ ಪಂದ್ಯ ದಲ್ಲಿ ಪಂಜಾಬ್ ಕಿಂಗ್ಸ್ ಎಲೆವನ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 48 ರನ್ ಗಳ ಅಂತರದಿAದ ಜಯಗಳಿಸಿತು.
ಮೊದಲು ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಎಲೆವನ್ ಮುಂಬೈ ಇಂಡಿಯನ್ಸ್ಗೆ ಬ್ಯಾಟಿಂಗ್ ಆಹ್ವಾನ ನೀಡಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್ ಕಳೆದು ಕಳೆದುಕೊಂಡು ನಿಗದಿತ 20 ಓವರ್‌ಗಳಲ್ಲಿ 191 ರನ್ ಮಾಡಿತು.
ಗೆಲುವಿಗೆ ಬೇಕಾದ ಈ ಮೊತ್ತವನ್ನು ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ಎಲೆವನ್ ತಂ ಡವು ಆರಂಭದಲ್ಲಿ ಎಡುವುದರ ಮೂಲಕ ಕೊನೆಯಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್‌ಗಳನ್ನು ಗಳಿಸಲು ಗಳಿಸಿತು.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ ಶರ್ಮಾ ಅವರ ಬಿರುಸಿನ 70 ರನ್ ಹಾಗೂ ಕಿರಾನ್ ಪೋಲಾರ್ಡ ಅವರ 47, ಹಾರ್ದಿಕ ಪಾಂಡೆ ಅವರ 30 ರನ್‌ಗಳ ನೆರವಿನಿಂದ ಈ ಗೆಲುವು ಸಾದ್ಯವಾಯಿತು.
ಅಲ್ಲದೇ ಮುಂಬೈ ಪರವಾಗಿ ಬೌಲ್ ಮಾಡಿದ ಜೇಮ್ಸ್ ಪ್ಯಾಟರ್‌ಸನ್, ಜಸ್‌ಪ್ರೀತ ಬುಮರಾ, ರಾಹುಲ್ ಚಾಹರ್ ಅವರ ಮಾರಕೆ ಬೌಲಿಂಗ್ ಎದಿರು ಪಂಜಾಬ್ ಕಿಂಗ್ಸ್ ಎಲೆವನ್ ತಂಡದ ಬ್ಯಾಟ್ಸ್ಮನಗಳ ಆಟ ನಡೆಯಲಿಲ್ಲ,. ಇವರೆಲ್ಲರು ತಲಾ 2 ವಿಕೆಟ್ ಪಡೆದು ಗೆಲುವಿಗೆ ಕಾರಣಿಭೂತರಾ ದರು.