ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ ಧರಿಸದವರ ವಿರುದ್ಧ ಪಾಲಿಕೆ ಕ್ರಮಕ್ಕೆ ಮುಂದಾಗಲಿ

0
1012

ಕಲಬುರಗಿ, ಸೆ. 29: ಈಗಾಗಲೇ ಸಾ ರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಹಾಗೂ ಮಾಸ್ಕ್ ಹಾಕದೆ ಸಂಚರಿಸುವವರ ವಿರುದ್ಧ ಸಂಚಾರಿ ಪೋಲಿಸರು ದಂಡ ಹಾಕುವ ಕಾರ್ಯಾಚರಣೆಗೆ ಮುಂದಾಗಿದ್ದು, ಇದನ್ನೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಕಾರ್ಯ ರೂಪಕ್ಕೆ ತಂದೆ ಹೆಚ್ಚುತ್ತಿರುವ ಕೊರೊನಾ ಮಹಾಮಾರಿಯಿಂದ ಜನರು ಸ್ವಲ್ಪವಾದರೂ ಸುರಕ್ಷಿತವಾಗಿರುತ್ತಾರೆ.
ಆದರೆ ಮಹಾನಗರಪಾಲಿಕೆ ಮಾತ್ರ ನಮ ಗೆ ಮತ್ತು ತರಕಾರಿ ಮಾರುಕಟ್ಟೆಗೆ ಸಂಬAಧ ವೇ ಇಲ್ಲವೆಂಬAತೆ ವರ್ತಿಸುತ್ತಿದೆ.
ಪೋಲಿಸರು ರಸ್ತೆಯ ಬದಿಯ ಬಳಿ ಕು ಳಿತಿರುವವರಿಗೆ ಮಾತ್ರ ರಸ್ತೆ ಆಚೆ ಕಳಿಸುತ್ತಿದ್ದು ಅವರಿಗೆ ಕೂಡಾ ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳುಲು ಮುಂದಾಗುವರೆ?
ರಸ್ತೆಯ ಅಕ್ರಮಣ?
ನಗರದ ಸುಪರ್ ಮಾರ್ಕೇಟ್, ಕಪಡಾ ಬಜಾರ, ಚಪ್ಪಲ ಬಜಾರ ರಸ್ತೆಗಳೇ ಇಲ್ಲ. ಕಾರಣ ಇಲ್ಲಿ ಕೈ ಬಂಡಿಗಳದ್ದೇ ಕಾರಬಾರು.
ಏನು ಕೇಳಿದರೂ ಮಹಾನಗರಪಾಲಿಕೆ ನಮಗೆ ಐಡಿ ಕಾರ್ಡ ಕೊಟ್ಟಿದೆ. ಅದರ ನೆಪದಲ್ಲಿ ರಸ್ತೆ ಬದಿಯಲ್ಲಿ ನಿಲ್ಲದೇ ರಸ್ತೆಯ ಮೇಲೆಯೆ ನಿಂತು ವಾಹನ ಚಾಲಕರಿಗೆ ದಬಾಯಿಸುತ್ತಾರೆ.
ಪೋಲಿಸರಾಗಲೀ, ಮಹಾನಗರಪಾಲಿಕೆ ಯವರಾಗಲೀ, ಪಿಡ್ಬೂ÷್ಲಡಿಯವರಾಗಲೀ ಏನು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವ ಜನಿಕರ ದೂರಾಗಿದೆ.
ಹೂವಿನ ಮಾರುಕಟ್ಟೆಯಂತೂ ಹೇಳ ತೀರದು, ಕಟ್ಟಿಗೆ ಹೂವಿನ ಹಾರ ಕಟ್ಟಿ ರಸ್ತೆ ಯಲ್ಲಿ ತಿರುಗಾಡುವವರ ಕಣ್ಣಿಗೆ ತಾಕುವ ಹಾಗೆ ಹಾಕಿರುವುದು ಮಹಾನಗರಪಾಲಿಕೆಗೆ ಪೋಲಿಸರಿಗೆ ಕಾಣವುದಿಲ್ಲವೇ, ಅಥವಾ ಕಂಡರೂ ಅರಿಯದಂತೆ ಇರುವವರೇ?

LEAVE A REPLY

Please enter your comment!
Please enter your name here