ಕರ್ನಾಟಕ ಬಂದ್‌ಗೆ ಕಲಬುರಗಿಯಲ್ಲಿ ನಿರಸ ಪ್ರತಿಕ್ರಿಯೆ

0
862

ಕಲಬುರಗಿ, ಸೆ. 28: ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ಸರಕಾರದ ಮೇಲೆ ಒತ್ತಡ ಹೇರಲು ಹಾಗೂ ಅದನ್ನು ವಾಪಸ್ಸು ಪಡೆಯಲು ಇಂದು ನೀಡಿದ್ದ ಕರ್ನಾಟಕ ಬಂದ್‌ಗೆ ಕಲಬುರಗಿಯಲ್ಲಿ ನಿರಸ ಪ್ರತಿಕ್ರೀಯೆ ವ್ಯಕ್ಯವಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಗರ ಸಾರಿಗೆ ಬಅಂದ್ ಆಗಿತ್ತು, ಪರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಬಸ್‌ಗಳನ್ನು ಪೋಲಿಸ್ ಬೆಂಗಾವಲಿನಲ್ಲಿ ತರಲಾಯಿತು.
12ರ ನಂತರ ಬಸ್ ಆರಂಭವಾಗಿ, ಬೆಳಿಗ್ಗೆಯಿಂದಲೇ ಆಟೊಗಳು ಖಾಸಗಿ ವಾಹನಗಳು ಎಂದಿನAತೆ ಸಂಚರಿಸುತ್ತಿದ್ದವು. ಮುಖ್ಯರಸ್ತೆಯ ಕೆಲವು ಅಂಗಡಿ ಮುಗ್ಗಟ್ಟುಗಳು ಮಾತ್ರ ಬಂದ್ ಆಗಿದ್ದವು, ಜನಜೀವನ ಎಂದಿನAತೆ ಮಾಮೂಲಾಗಿತ್ತು, ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಹಾಲು ಇವುಗಳಿಗೆ ಬಂದ್‌ನಿAದ ವಿನಾಯಿತಿ ನೀಡಲಾಗಿತ್ತು.
ಬಂದ್ ಪ್ರಯುಕ್ತ ಮೆರವಣಿಗೆಯಲ್ಲಿ ಸಾವಿರಾರು ಕಾರ್ಮಿಕರು, ರೈತಾಪಿ ಜನರು, ದಲಿತ ಮುಖಂಡರು, ಕಾರ್ಮಿಕ ಮುಖಂಡರು, ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದ್ದರು.
ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾ ಮೆರವಣಿಗೆಯು ಕೇಂದ್ರ ಬಸ್ ನಿಲ್ದಾಣದಿಂದ ವಲ್ಲಭಬಾಯಿ ಪಟೇಲ್ ವೃತ್ತದಿಂದ ನೆಹರು ಗಂಜಗೆ ತೆರಳಿ ಅಲ್ಲಿಂದ ನಂತರ ಮುಖ್ಯ ರಸ್ತೆಯ ಮುಖಾಂತರ ಜಗತ್ ವೃತ್ತದಲ್ಲಿ ಜಮಾಯಿಸಿ ಬ್ರಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಸಿಪಿಐ ಎಂ. ಹಾಗೂ ರೈತ ಧುರೀನ ಕಾ. ಮಾರುತಿ ಮಾನಪಡೆ ಅವರ ನೇತೃತ್ವದಲ್ಲಿ ಶರಣಬಸವಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಮುಕೇಶ ಎಸ್.ಬಿ, ರವಿ ದೇಗಾಂವ, ಅಸಗರ ಚುಲಬುಲ್ ಸೆರಿದಂತೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು, ಸಿಐಟಿಯು, ಎಸ್‌ಎಫ್.ಐ, ಡಿಎಸ್‌ಎಸ್ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು, ಕಾರ್ಮಿಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಕೆಂಪು, ನೀಲಿ, ರಕ್ಷಣಾ ವೇದಿಕೆಗಳ ಧ್ವಜಗಳು ರಾರಾಜಿಸುತ್ತಿದ್ದವು.

LEAVE A REPLY

Please enter your comment!
Please enter your name here