ಕಲಬುರಗಿ, ಸೆ.27: ಸುಗ್ರೀವಾಜ್ಞೆ ಮೂಲಕ ರಾಜ್ಯ ಸರಕಾರಗಳೊಂದಿಗೆ ಚರ್ಚಿಸದೇ ಏಕಾಏಕಿ ಲೋಕಸಭೆಯಲ್ಲಿ ಹಾಗೂ ರಾಜ್ಯ ಸಭೆಯಲ್ಲಿ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಬಿಲ್ ಪಾಸ್ ಮಾಡಿದ ಕೇಂದ್ರದ ಹಾಗೂ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರದೆ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ನಾಳೆ ಸೆ. 28ರ ರೈತ ಸಂಘಟನೆಗಳು ಸೇರಿದಂತೆ ಇನ್ನು ಹಲವಾರು ಸಂಘಟನೆಗಳು ನಡೆಸಲು ಉದ್ದೇಶಲಾಗಿದ್ದ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಹೈದ್ರಾಬಾದ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಂದಕುಮಾರ ಎಲ್. ನಾಗಭುಜಂಗೆ ಹಾಗೂ ಜೈ ಕನ್ನಡಿಗರ ಸೇನೆ ಸೇನೆಯ ರಾಜ್ಯಾಧ್ಯಕ್ಷ ದತ್ತು ಭಾಸಗಿ ಅವರು ಪ್ರತ್ಯೇಕವಾಗಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಈ ರೈತ ವಿರೋಧಿ ಸರ್ಕಾರದ ಬಲ್ ವಾಪಸ್ಸತಾಗಿ ನಮ್ಮ ಸಂಘಟನೆಯು ನಾಳಿನ ಬಂದ್‌ನಲ್ಲಿ ಸಕ್ರೀಯವಾಗಿ ಭಾಗವಹಿಸಲಿದೆ ಎಂದಿದ್ದಾರೆ.
ಈ ಕಾಯ್ದೆ ಜಾರಿಗೆ ರೈತರರೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ಈ ಕಾಯ್ದೆಗಳನ್ನು ಕೂಡಲೆ ವಾಪಸ್ಸು ಪಡೆಯಬೇಕು ರೈತರ ಹಾಗೂ ಹಲವಾರು ರೈತ ಪರ ಸಂಘಟನೆಗಳು ನಡೆಸುವ ಹೋರಾಟಕ್ಕೆ ನಮ್ಮ ಸಂಘಟನೆಗಳು ಸೇರಿದಂತೆ ಇನ್ನು ಹಲವಾರು ಸಂಘಟನೆಗಳು ಸಂಪೂರ್ಣ ಬೆಂಬಲ ನೀಡುತ್ತಿವೆ ಎಂದು ಅವರು ತಿಳಿಸಿದ್ದು, ಈ ಬಂದ್‌ನಲ್ಲಿ ನಮ್ಮ ಸಂಘಟನೆಯು ಕೂಡಾ ಭಾಗವಹಿಸಲಿದೆ ಎಂದಿದ್ದಾರೆ.