ಕಲಬುರಗಿ, ಸೆ. 20: ಆಕಸಿಕವಾಗಿ ತಗುಲಿದ ಬೆಂಕಿಗೆ ಎರಡು ಚಪ್ಪಲ ಅಂಗಡಿಗಳು ಸುಟ್ಟು ಭಸ್ಮವಾದ ಘಟನೆ ನಿನ್ನೆ ರಾತ್ರಿ ಸುಮಾರು 11.30 ಗಂಟೆಗೆ ನಗರದ ಆಸಿಫ ಗಂಜ ಶಾಲೆ ಎದುಗಡೆರುವ ಚಪ್ಪಲ ಬಜಾರದಲ್ಲಿ ನಡೆದಿದೆ.
ಮಂಜೂರು ಅಹ್ಮದ ಸೇರಿದ ಚಪ್ಪಲ ಅಂಗಡಿಗೆ ಬೆಂಕಿಗಾಹುತಾಯದ ಬೆನ್ನಲ್ಲೆ ಮತ್ತೊಂದು ಪಕ್ಕದ ಅಂಗಡಿಗೆ ಬೆಂಕಿ ಹತ್ತಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ಕೊನೆಗೆ ಬೆಂಕಿ ನಂದಿಸಿದರು.
ಸುಮಾರು ಒಂದುವರೆ ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯನಡೆದಿತ್ತು. ರಬ್ಬರ ಮತ್ತು ಪ್ಲಾಸ್ಟಿಕ್‌ನಿಂದ ಕೂಡಿದ ಚಪ್ಪಲವಾಗಿರುವುದರಿಂದ ಬೆಂಕಿ ಹತ್ತಿ ಹೊಗೆ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿ, ಸೇರಿದ ಜನರನ್ನು ಚದುರಿಸಿದರು.
ಬೆಂಕಿಗಾಹುತಿಯಾದ ಅಂಗಡಿಗಳು ಮಂಜೂರು ಅಹ್ಮದ ಹಾಗೂ ಮೋಹಸಿನ ಎಂಬುವವರಿಗೆ ಸೇರಿದ್ದಾಗಿದೆ.
ಈ ಅನಾಹುತಿದಿಂದಾಗಿ ಸುಮಾರು 4 ರಿಂದ 5 ಲಕ್ಷ ರೂ. ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.