ಆಬುದಾಬಿ, ಸೆ. 19: 2020ರ ಇಂಡಿಯನ್ ಪ್ರೀಮಿಯರ್ ಲೀಗನ್ ಪ್ರಥಮ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೆöÊ ಸೂಪರ್ ಕಿಂಗ್ ತಂಡವು ಮುಂಬೈ ಇಂಡಿಯನ್ ತಂಡವನ್ನು ಸೋಲಿಸಿ, ಗೆಲುವಿನ ಸೋಪಾನ ಹಾಸಿತು.
ಇಲ್ಲಿನ ಶೇಕ್ ಜೇಯಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಸಿಎಸ್‌ಕೆ ಮುಂಬೈ ತಂಡವನ್ನು ಬ್ಯಾಂಟಿಗ್ ಮಾಡಲು ಅಹ್ವಾನಿಸಿತು. ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್‌ಗಳ ಟಾರ್ಗೆಟ್ ನೀಡಿತು. ಚೆನ್ನೆöÊ ಸೂಪರ್ ಕಿಂಗ್ 19.2 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 166 ರನ್ ಮಾಡಿ, ಗೆಲುವು ತನ್ನ ಮಡಿಲಿಗೆ ಏರಿಸಿಕೊಂಡಿತು.
ಮುAಬೈ ಇಂಡಿಯನ್ಸ್ ಪರವಾಗಿ ಎಸ್‌ಎಸ್ ತಿವಾರಿ 42, ಕ್ವಿಂಟಾನ್ ಡಿಕ್ವಾಕ್ 33, ಕೆರಾನ್ ಪೋಲಾರ್ಡ 18, ಯಾದವ 17, ನಾಯಕ ರೋಹಿತ ಶರ್ಮಾ 12, ಹಾರ್ದಿಕ ಪಾಂಡ್ಯ 14, ಪ್ಯಾಟರಸ್ಸ್ö್ನ 11 ರನ್‌ಗಳನ್ನು ಮಾಡಿದರು.
ಸಿಎಸ್‌ಕೆ ಪರವಾಗಿ ಬೌಲ್ ಮಾಡಿದ ಲುಂಗಿ ನಿಗಡಿ 3, ದೀಪಕ ಶಾಹರ 2, ರವೀಂದ್ರ ಜಡೆಜಾ 2, ಸ್ಯಾಮ ಚುರನ್ ಮತ್ತು ಚಾವಲಾ ತಲಾ ಒಂದು ವಿಕೆಟ್ ಪಡೆದರು.
ಸಿಎಸ್‌ಕೆ ಪರವಾಗಿ ಡುಪ್ಲಸಿ 58 ಮತ್ತು ಅಂಬತ್ತಿ ನಾಯ್ಡು 71 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ ದೊಡ್ಡ ಮೊತ್ತವನ್ನು ದಾಟಿ ಗೆಲುವು ಸಾಧಿಸಿತು.
ಮುಂಬೈ ಇಂಡಿಯನ್ ತಂಡದ ಪರವಾಗಿ ಬೌಲ್ ಮಾಡಿದ ಐದು ಬೌಲರ್‌ಗಳು ತಲಾ ಒಂದೊAದು ವಿಕೆಟ್ ಪಡೆದು, ಸಿಎಸ್‌ಕೆ ತಂಡವನ್ನು ಕಟ್ಟಿ ಹಾಕಲು ಅಸಮರ್ಥರಾದರು.