ಕಲಬುರಗಿ, ಸೆ. 16:ಜೇಸ್ಕಾಂ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ನಗರದಲ್ಲಿ ಹಲವಾರು ತಿಂಗಳಿAದ ಮೂಕ ಪ್ರಾಣಿಗಳಾದ ಆಕಳು, ಎಮ್ಮೆ, ಕರುಗಳು ಸಾವನ್ನಪುತ್ತಿದ್ದರೂ ಎಚ್ಚತ್ತುಕೊಳ್ಳದ ಜೇಸ್ಕಾಂ ನಿರ್ಲಕ್ಷಕ್ಕೆ ಇಂದು ಸ್ಟೇಷನ್ ಏರಿಯಾದ ಕಂಬವೊAದದ ಬಳಿ ಆಕಳು ಬಲಿಯಾಗಿದೆ.
ಇಂದು ಮಧ್ಯಾನ್ನ ಸುಮಾರಿಗೆ ಈ ಘಟನೆ ನಡೆದಿದ್ದು, ಇದು ಹಳೆದ ಗುರುದತ್ತ ಭೋಜನಾಲಯ ಎದುರುಗಡೆ ಇರುವ ಕೆಇಬಿ ಕಂಬಕ್ಕೆ ಇಳಿಮುಖವಾಗಿ ಕೈಗೆಟಕುವ ರೀತಿಯಲ್ಲಿ ಜೋತಾಡುತ್ತಿರುವ ವಿದ್ಯುತ್ ತಂತಿ ತಗಲು ಈ ಘಟನೆ ನಡೆದಿದೆ.
ಈ ಘಟನೆಯ ಬಗ್ಗೆ ಪ್ರಾಣಿದಯಪರ ಕಾಳಜಿಯ ಜನಸಾಮಾನ್ಯರು ಮರುಗಿ, ಜೇಸ್ಕಾಂದವರಗಿಎ ಹಿಡಿಶಾಪಹಾಕುತ್ತಿದ್ದು, ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದಲ್ಲದೇ ಈಗಾಗಲೇ ಇಂತಹ ಅನೇಕ ಘಟನೆಗಳು ನಗರದಲ್ಲಿ ನಡೆದಿದ್ದು, ದನಕರುಗಳಷ್ಟೇ ಅಲ್ಲ ಇದರಿಂದ ಜನಸಾಮಾನ್ಯರಿಗೂ ಅದರಲ್ಲು ಮಕ್ಕಳಿಗೆ ತುಂಬಾ ಅಪಾಯಕಾರಿಯಾಗಿದ್ದು, ಮುಖ್ಯರಸ್ತೆ, ಸೇರಿದಂತೆ ಓಣಿಗಳಲ್ಲಿರುವ ಚಿಕ್ಕ ಚಿಕ್ಕ ರಸ್ತೆ ದೀಪಗಳ ಕಂಬಕ್ಕೆ ದೀಪ ಹಾಕಲು ಸ್ವೀಚ್ ಬಟನ್ ಅಳವಡಿಸದೆ ಎರಡು ಬಡಿಯಾಗಿ ವ್ಯಾಯರ್‌ಗಳನ್ನು ಬಿಟ್ಟು ಅದರನ್ನು ನೆಲದಿಂದ ಸ್ವಲ್ಪ ಮೇಲಷ್ಟೇ ಬಿಟ್ಟಿರುವುದು ಎಲ್ಲಡೆ ಕಾಣಬಹುದು.
ಈಗಲಾದರೂ ಜೇಸ್ಕಾಂ ಅಧಿಕಾರಿಗಳು ಎಚ್ಚೇತ್ತು, ಬೀಡಿಯಾಗಿ ಬಿಟ್ಟಿರುವ ಕೇಬಲ್ ಕರೆಂಟ್ ವಾಯರ್‌ಗಳನ್ನು ಒಂದು ಅಚ್ಚುಕಟ್ಟಾದ ಕಟೌಟ್‌ಗೆ ಅಳವಡಿಸಿ ಯಾವುದೇ ಅಪಾಯ ಸಂಭವಿಸಿದAತೆ ನೋಡಿಕೊಳ್ಳವರೇ?