ಎಸಿಬಿ ಬಲೆಗೆ ಜೇವರ್ಗಿ ಕೃಷಿ ಸಹಾಯಕ ನಿರ್ದೇಶಕ ಯರಗೋಳ

0
1167

ಕಲಬುರಗಿ. ಸೆ. 15: ರೈತರಿಗೆ ನೀಡಿದ್ದ ನಿಲ್ದಾಣವು ಸಲಕರಣೆಗಳ ಬಿಲ್ ಪಾಸ್ ಮಾಡಲು ರೂ. 50 ಸಾವಿರ ಲಂಚ ಪಡೆಯುತ್ತಿದ್ದ ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲಕುಮಾರ ಯರಗೋಳ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜೇವರ್ಗಿ ರೈತ ಶರಣಗೌಡ ಎಂಬುವವರ ಬಿಲ್ ಪಾಸ್ ಮಾಡಲು 1.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆ ಪೈಕಿ 50 ಸಾವಿರ ಹಣವನ್ನು ಪಡೆಯುತ್ತಿದ್ದ ವೇಳೆ ನಗರದ ಕನ್ನಡ ಭವನದ ಬಳಿ ಎಸಿಬಿ ಡಿವೈಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ಅಧಿಕಾರಿ ಗಳು ದಾಳಿ ನಡೆಸಿದರು.
ಈ ಘಟನೆಯು ಇಂದು ಮಧ್ಯಾಹ್ನ ಸುಮಾರು 2.45ಗಂಟೆಗೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ.

LEAVE A REPLY

Please enter your comment!
Please enter your name here