ಕೊರೊನಾ ನಿಲ್ಲದ ಅರ್ಭಟ ರಾಜ್ಯದಲ್ಲಿ ಶನಿವಾರ 9140 ಹೊಸ ಪ್ರಕರಣಗಳು

0
959

ಬೆಂಗಳೂರು, ಸೆ. 12: ಮಾರ್ಚನಲ್ಲಿದ್ದ ಕೊರೊನಾ ಭಯ ಈಗ ಜನರಿಗಿಲ್ಲದಂತಾಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡರೂ ಕೂಡಾ ರಾಜ್ಯದಾದ್ಯಂತ ಎಲ್ಲವೂ ಸಹಜವಾಗಿಯೆ ನಡೆದಿರುವುದು ಜನರು ಕೊರೊನಾ ಮರೆತಂತೆ ಕಾಣುತ್ತಿದೆ.
ಇಂದು ಹೊಸ ಪ್ರಕರಣಗಳ ದಾಖಲೆಗಿಂತ ಹೆಚ್ಚು 9557 ಜನರು ಕೊರೊನಾದಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಇದರಿಂದಾಗಿ ಒಟ್ಟು ಇಲ್ಲಿಯವರೆಗೆ 344556 ಜನರು ಗುಣಮುಖರಾದಂತಾಗಿದೆ.
ಒಟ್ಟು 449551 ಪ್ರಕರಣಗಳಿದ್ದರೆ ಅದರಲ್ಲಿ 97815 ಸಕ್ರೀಯ ಪ್ರಕರಣಗಳಿವೆ. ಇಂದು ಈ ಮಹಾಮಾರಿಗೆ 94 ಜನರು ಬಲಿಯಾಗಿದ್ದು, ಇಲ್ಲಿಯವರೆಗೆ ಕೋವಿಡ್-19ರಿಂದಾಗಿ ಒಟ್ಟು 7161 ಜನರು ಸಾವಿಗೀಡಾಗಿದ್ದಾರೆ.
ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ 795 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ವರದಿಯಾದಂತೆ ಬೆಂಗಳೂರು ನಗರದಲ್ಲಿ ಇಂದು ಹೆಚ್ಚು 3552 ಜನರಿಗೆ ಸೋಂಕು ತಗುಲಿದ್ದು ಉಳಿದಂತೆ ಮೈಸೂರು 637, ದಕ್ಷಿಣ ಕನ್ನಡ 401, ಬಳ್ಳಾರಿ 366, ಹಾಸನ 324, ತುಮಕೂರ 304, ದಾವಣಗೆರೆ 267, ಧಾರವಾಡ 239, ಚಿತ್ರದುರ್ಗ 227, ಕಲಬುರಗಿ 222, ಹಾವೇರಿ 213, ಬೆಂಗಳೂರು ಗ್ರಾಮೀಣ 211, ಬೆಳಗಾವ 201, ಮಂಡ್ಯ 193, ಕೊಪ್ಪಳ 183, ಬಾಗಲಕೋಟೆ 175, ಉಡುಪಿ 169, ಚಿಕ್ಕಮಗಳೂರು 159, ಶಿವಮೊಗ್ಗ 155, ಯಾದಗಿರ 151, ರಾಯಚೂರು 131, ಉತ್ತರ ಕನ್ನಡ 130, ಚಿಕ್ಕಬಳ್ಳಾಪುರ ಮತ್ತು ಬೀದರ ಕ್ರಮವಾಗಿ 101, ರಾಮದುರ್ಗ 81, ಚಾಮರಾಜನಗರ 60, ವಿಜಯಪುರ 58, ಕೋಲಾರ 53, ಗದಗ 49 ಮತ್ತು ಕೊಡಗು ಜಿಲ್ಲೆಯಲ್ಲಿ 27 ಹೊಸ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 21, ಮೈಸೂರಿನಲ್ಲಿ 14 ಜನರು ಸಾವನ್ನಿಪ್ಪಿದ್ದರೆ, ಧಾರವಾಡದಲ್ಲಿ 9, ಬಳ್ಳಾರಿಯಲ್ಲಿ 8, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ತಲಾ 5 ಜನರು, ಚಿತ್ರದುರ್ಗ ಮತ್ತು ಕೊಪ್ಪಳದಲ್ಲಿ 4, ಕಲಬುರಗಿಯಲ್ಲಿ 3, ಉಳಿದಂತೆ ಹಲವಾರು ಜಿಲ್ಲೆಗಳಲ್ಲಿ ಒಂದು, ಎರಡು ಸಾವು ಸಂಭವಿಸಿವೆ.

LEAVE A REPLY

Please enter your comment!
Please enter your name here