4 ಜನ ಕುಖ್ಯಾತ ಸರಗಳ್ಳರ ಬಂಧನ 271 ಗ್ರಾಂ ಬಂಗಾರದ ಆಭರಗಳ ಜಪ್ತಿ

0
1092

ಕಲಬುರಗಿ, ಸೆ. 11: ನಗರದ ಹಲವಾರು ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ಸುಮಾರು 11 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಜನ ಕುಖ್ಯಾತ ಕಳ್ಳರನ್ನು ಹಾಗೂ ಅವರಿಂದ 271 ಗ್ರಾಮ ಬಂಗಾರದ ಆಭರಣಗಳನ್ನು ನಗರದ ಆಟೋ ನಗರದ ಲಾರಿ ತಂಗುದಾಣದ ಹತ್ತಿರ ಕರ‍್ಯಾಚರಣೆ ಮಾಡಿ ಬಂಧಿಸಿ ವಶಕ್ಕೆ ಪಡೆಯಲಾಗಿದೆ.
ಈ ಕರ‍್ಯಾಚರಣೆಯು ಚೌಕ್ ಪೋಲಿಸ್ ಠಾಣೆಯ ಇನ್ಸ್ಪೇಕ್ಟರ್ ಎಸ್. ಆರ್. ನಾಯಕ ಅವರ ನೇತೃತ್ವದಲ್ಲಿ ನಡೆದಿದ್ದು, ಆರೋಪಿಗಳಾದ ದೀಪಕ ತಿಪ್ಪು ರಾಠೋಡ, ರೂಪೇಶ ಪವಾರ, ಜೈಭೀಮ ಕಮಲಾಪೂರಕ್ ಮತ್ತು ಸಂತೋಷ ಪವಾರ ಅವರನ್ನು ಬಂಧಿಸಿದ್ದಾರೆ.
ಸುಮಾರು 13.8 ಲಕ್ಷ ರೂ. ಮೌಲ್ಯದ 271 ಚಿನ್ನದ ಆಭರಣಗಳು ಅಲ್ಲದೇ ಅಪರಾಧವೆಸಗಲು ಬಳಸಲಾದ ಒಂದು ದ್ವೀಚಕ್ರ ವಾಹನ ಸಹ ಜಪ್ತಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ರಮೇಶ ಕೌನಳ್ಳಿ ತಾಂಡಾ ಹಾಗೂ ಇನ್ನೊಬ್ಬ ತಲೆ ಮರೆಸಿಕೊಂಡಿದ್ದು, ಅವರ ಶೋಧಕ್ಕಾಗಿ ಪೋಲಿಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಕಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಸತೀಶಕುಮಾರ ಹಾಗೂ ಕಾನೂನು ಸುವ್ಯವಸ್ಥೆಯ ಡಿಸಿಪಿ ಕಿಶೋರಬಾಬು, ಉಪ ಪೋಲಿಸ್ ಆಯುಕ್ತರಾದ ಗಿರೀಶ ಹಾಗೂ ಅಪರಾಧ ವಿಭಾಗದ ಎಸಿಪಿ ಶ್ರೀಕಾಂತ ಕಟ್ಟಿಮನಿ ಅವರುಗಳ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.
ಈ ಕರ‍್ಯಾಚರಣೆಯಲ್ಲಿ ಚೌಕ್ ಠಾಣೆಯ ಸಿಬ್ಬಂದಿಗಳಾದ ರಾಜಕುಮಾರ, ಅಶೋಕ, ಸೈಯದ್ ತೌಸಿಫ್ ಹುಸೇನ, ನಾಗೇಂದ್ರ, ಸಿದ್ರಾಮಯ್ಯ, ಉಮೇಶ, ಬಂದೇನವಾಜ ಅವರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here