ಕಲಬುರಗಿ, ಸೆ. 10: ಇತ್ತೀಚೆಗೆಷ್ಟ ಅಫಜಲಪೂರ ತಾಲೂಕಿನ ಹವಳಗಾ ಗ್ರಾಮದ ಮನೆಯ ಮೇಲೆ ಹಾಗೂ ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಕೊಲೆ ಸಂಚು ರೂಪಿಸಿದ್ದು, ಇದರ ಹಿಂದೆ ಪ್ರಭಲ ರಾಜಕಾರಣಿಗಳ ಕೈವಾಡವಿದೆ ಎಂದು ಕಾಂಗ್ರೆಸ್‌ನ ಯುವ ಮುಖಂಡ ರಾದ ಶಿವಕುಮಾರ ನಾಟೀಕರ್ ಅವರು ಆರೋಪಿಸಿದರು.
ಅವರಿಂದಿಲ್ಲಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕಳೆದ 12 ವರ್ಷಗಳಿಂದ ನಿರಂತರವಾಗಿ ಜನಪರ ಕೆಲಸ ಕಾರ್ಯಗಳನ್ನು ಹಾಗೂ ಹೋರಾಟ ಮಾಡಿಕೊಂಡು ಬಂದಿರುವ ನನ್ನ ಏಳಿಗೆ ಹಾಗೂ ಬೆಳವಣಿಗೆಯನ್ನು ಸಹಿಸದೆ ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿ, ಮನೆಯ ಮುಂದೆ ನಿಲ್ಲಿಸಿದ ಕಾರಿನ ಗಾಜು ಪುಡಿ ಪುಡಿ ಮಾಡಿ, ಪರಾರಿಯಾದವರು ಸುಪಾರಿ ಕೊಲೆಗಾರರಾಗಿದ್ದು, ಅವರು ವಿರುದ್ಧ ದೂರು ನೀಡಲಾಗಿದೆ. ಅಲ್ಲದೇ ಪೋಲಿಸರು ಈಗಾಗಲೇ ಇಬ್ಬರು ಆರೋಪಿಗಳೆನ್ನಲಾದ ಮಾಳಪ್ಪ ಮತ್ತು ಸಂತೋಷವೆAಬವರನ್ನು ಬಂದಿಸಿದ್ದಾರೆ ಎಂದು ವಿವರಿಸಿದರು.
ನನ್ನ ಮೇಲೆ ಹಲ್ಲೆ ನಡೆದು ಬಹಳ ದಿನಗಳಾದರೂ ಕೂಡಾ ರಾಜ್ಯದಾದ್ಯಂತ ಹಲವಾರು ಜನಪರ ಕಾಳಜಿಯುಳ್ಳ ವಿಚಾರವಂತರು, ಅಲ್ಲದೇ ಸಂಘಟನೆಗಳು ಪ್ರತಿಭಟನೆ ನಡೆಸಿ, ನನ್ನ ಬೆನ್ನ ಹಿಂದೆ ನಿಂತಿದ್ದಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಅತೀ ಶ್ರೀಘದ್ರದಲ್ಲಿಯೇ ಈ ಘಟನೆಯ ಹಿಂದಿನ ಕೈವಾಡವಿರುವ ಪ್ರಭಾವಿ ರಾಜಕಾರಣಿಯ ಹೆಸರು ಬಹಿರಂಗ ಪಡಿಸುವೆ ಎಂದ ಅವರು ಕಳೆದ 30 ವರ್ಷಗಳಿಂದ ಅಫಜಲಪೂರ ತಾಲೂಕಿನಲ್ಲಿ ರಾಜಕೀಯವಾಗಿ ಬೆಳೆಯುವದನ್ನು ಸಹಿಸದೆ ಹಲ್ಲೆ, ಜಾತಿ ಜಾತಿಯ ಮಧ್ಯೆ ವೈಷಮ್ಯ ಬೆಳೆಸುವುದು, ಕಾನೂನುನ್ನು ಕೈತೆಗೆದುಕೊಂಡು ಹಲವಾರು ಹಿಂಸಾರೂಪದ ಘಟನೆಗಳು ನಡೆದಿದ್ದು ಎಲ್ಲರಿಗೆ ತಿಳಿದ ಸಂಗತಿಯೇ ಆಗಿದೆ ಎಂದರು.