18 ವರ್ಷದ ಯುವಕನಿಗೆ ಕ್ರಿಪ್ಟೋಜೆನಿಕ್ ಡಿಕೊಂಪೆನ್ಸೇಟೆಡ್ ಲಿವರ್ ಡಿಸೀಸ್ ಲೀವರ್ ಕಸಿಗಾಗಿ ಧನ ಸಹಾಯಕ್ಕಾಗಿ ಪೋಷಕರ ಮನವಿ

0
1209

ಕಲಬುರಗಿ, ಸೆ. 8: ನಗರದ ರೋಜಾ ಬಡಾವಣೆಯ ಬಡಕುಟುಂಬದ 18 ವರ್ಷ ವಯಸ್ಸಿನ ಯುವಕ ಜೀವನ್ ತಂದೆ ನಿರಂಜನತ್ ಎಂಬವನಿಗೆ ಕ್ರಿಪ್ಟೋಜೆನಿಕ್ ಡಿಕೊಂಪೆನ್ಸೇಟೆಡ್ ಲಿವರ್ ಡಿಸೀಸ್ ಇರುವುದು ಪತ್ತೆಯಾಗಿದ್ದು ಜೀವನ ಮರಣದೊಂದಗಿಗೆ ಹೊರಾಡುತ್ತಿದ್ದಾನೆ.
ಪಿತ್ತಜನಕಾಂಗ (ಲೀವರ್) ಕಸಿಗಾಗಿ ಬೆಂಗಳೂರಿನ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪಿತ್ತಜನಕಾಂಗದ ಕಸಿಗೆ ಅಂದಾಜು ಪ್ಯಾಕೇಜ್ ರೂ. 15 ಲಕ್ಷ ಆದರೆ ಆಸ್ಪತ್ರೆಯು 12.5 ಲಕ್ಷಗಳಿಗೆ ಸಬ್ಸಿಡಿ ನೀಡಿದೆ.
ಇಂತಹದೊAದು ರೋಗದಿಂದ ಬಳಲುತ್ತಿರುವ ಬಡಕುಟುಂಬಕ್ಕೆ ಆರ್ಥಿಕವಾಗಿ ಇಷ್ಟು ಹಣ ಖರ್ಚು ಮಾಡಿ ಕಸಿ ಮಾಡಿಸಿವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ನೊಂದ ಬಡ ಅಲ್ಲದೇ ಇನ್ನು ಸರಿಯಾಗಿ ಪ್ರಪಚಂವೇ ಅರ್ಥೈಸಿಕೊಳ್ಳದ ಯುವಕನ ಕಥೆ ಎಂಥವರನ್ನು ತಬ್ಬಿಬ್ಬಾಗಿ ಮಾಡುವುದಲ್ಲದೇ ಕಣ್ಣಿರು ತರಿಸುವ ಘನಡೆಯಾಗಿದ್ದು, ಈ ಯುವಕನ ಲೀವರ್ ಕಸಿಗಾಗಿ ಇನ್ನೆರಡು ದಿನ ಬಾಕಿಯಿದ್ದು, ಎಲ್ಲ ಸ್ನೇಹಿತರು ಮತ್ತು ಸಾರ್ವಜನಿಕರು, ಧನಿಕರು ಇತನ ನೆರವಿಗೆ ಬಂದು ಹಣಕಾಸು ನೆರವು ನೀಡಲು ಸಹಾಯ ಮಾಡುವಂತೆ ಯುವಕನ ತಂದೆ ಬೆಂಬಲಿಸುವAತೆ ಕೋರಿದ್ದಾರೆ.
ಈಗಾಗಲೇ 9 ಲಕ್ಷ ರೂ.ಗಳ ಧನ ಸಹಾಯ ಪ್ರವಾಹ ರೂಪದಲ್ಲಿ ಬಂದಿದ್ದು, ಇನ್ನು 3.5 ಲಕ್ಷ ರೂ. ಗಳ ಅಗತ್ಯವಿದ್ದು, ದಯವಿಟ್ಟು ಸಾರ್ವಜನಿಕರು, ವ್ಯಾಪಾರಸ್ಥರು, ಉಳ್ಳವರು, ಧನಿಕರು ಮುಂದೆ ಬಂದು ಧನ ಸಹಾಯ ಮಾಡುವುದರೊಂದಿಗೆ ಒಬ್ಬ ಯುವಕನ ಜೀವ ಉಳಿಸಿದ ಶ್ರೇಯಸ್ಸು ಪಡೆದುಕೊಂಡAತಾಗುತ್ತದೆ ಎಂದು ಅವರ ಪೋಷಕರು ಮನವಿ ಮಾಡಿದ್ದಾರೆ.

  • Virtual account name: Jeevan Prakash – Milaap
  • Account number: 2223330061530501
  • IFSC code: RATN0VAAPIS
  • Bank name: RBL

LEAVE A REPLY

Please enter your comment!
Please enter your name here