ವಿವಿಧ ಬಡಾವಣೆಗಳಲ್ಲಿ ಹಂದಿ ಕಾಟ ಹಂದಿ ಸಾಗಾಟಕ್ಕೆ ಗಡುವು ನೀಡಿದ ಆಯುಕ್ತರು

0
970

ಕಲಬುರಗಿ,ಸೆಪ್ಟೆಂಬರ್. 7– ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಅನಧೀಕೃತವಾಗಿ ಸಾಕುತ್ತಿರುವ ಹಂದಿಗಳ ಮಾಲೀಕರು ತಮ್ಮ ಹಂದಿಗಳನ್ನು ಐದು ದಿನದೊಳಗಾಗಿ ಬೇರೆ ಸ್ಥಳಕ್ಕೆ ಸಾಗಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಹಂದಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕಲಬುರಗಿ ನಗರದಲ್ಲಿ ಅನಧಿಕೃತವಾಗಿ ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಹಂದಿಗಳನ್ನು ಸಾಕುತ್ತಿರುವ ಹಂದಿ ಮಾಲೀಕರೊಂದಿಗೆ ಸಭೆ ನಡೆಸಿ ಮಾಡನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಹಂದಿ ಸಾಕಾಣಿಕೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಹಾಗೂ ಜನರಿಗೆ ಪ್ರಾಣಿ ಜನ್ಯ ರೋಗಗಳು ಹರಡುವು ಸಾಧ್ಯತೆಗಳಿವೆ. ಹಂದಿಗಳ ಸಮಸ್ಯೆಗಳನ್ನು ನಿವಾರಿಸಲು ಕಲಬುರಗಿಯ ನಗರದ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ಈ ಹಿಂದೆ 2020ರ ಜೂನ್ 20 ರಂದು ಕೂಡ ಹಂದಿ ಮಾಲೀಕರ ಸಭೆಯನ್ನು ಕರೆಯಿಸಿ ನಗರದಲ್ಲಿನ ತಮ್ಮ ತಮ್ಮ ಹಂದಿಗಳನ್ನು ಹಿಡಿದು ಸ್ಥಳಾತರಿಸಲು ಸೂಚಿಸಲಾಗಿತ್ತು. ಮೂರು ಬಾರಿ ಲಿಖಿತ ನೋಟೀಸ್ ಕೂಡ ನೀಡಲಾಗಿದ್ದರೂ ಹಂದಿಗಳ ಮಾಲೀಕರು ತಮ್ಮ ಅನಧೀಕೃತವಾಗಿ ಚಟುವಟಿಕೆ ಮುಂದುವರೆಸಿದ್ದಾರೆ ಎಂದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಹಿರಿಯ ಪಶುವೈದ್ಯಾಧಿಕಾರಿ ಡಾ. ಮುಹಮ್ಮದ ಸಖಾವತ ಹುಸೇನ್, ಕಲಬುರಗಿ ಬ್ರಹ್ಮಪೂರ ಪೋಲಿಸ್ ಠಾಣೆಯ ಸಿ.ಪಿ.ಐ. ಕಪಿಲ್‌ದೇವ್ ಹಾಗೂ ಕಲಬುರಗಿ ನಗರದ ಹಂದಿ ಮಾಲೀಕರಾದ ಗೊಲ್ಲೂರ ಗಲ್ಲಿಯ ಕಾಟಪ್ಪ, ಗುಬ್ಬಿ ಕಾಲೋನಿ ಗೋವಿಂದ, ಪಂಚಶೀಲ್ ನಗರ, ಅಜಯ ವಿಕ್ಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here