ಅರ್ಜಿ ಹಾಕಿ ಅಲೆದರೂ ಸಿಗದ ವ್ಯಾಪಾರ ಟ್ರೇಡ್ ಲೈಸೆನ್ಸ್ ಪಡೆಯಲು ಕ್ಯಾಂಪ್

0
1367

ಕಲಬುರಗಿ, ಸೆ. ೭: ಪರವಾನಿಗೆಗಾಗಿ ಅರ್ಜಿ ಹಿಡಿದು ಮಹಾನಗರಪಾಲಿಕೆಗೆ ಅಲೆದರೂ ಸಿಗದ ವ್ಯಾಪಾರ ವಹಿವಾಟಿನ (ಟ್ರೇಡ್ ಲೈಸೆನ್ಸ್) ಪರವಾನಿಗೆ ಈಗ ಕ್ಯಾಂಪ್ ಮಾಡುವ ಮೂಲಕ ನೀಡಲು ಯೋಚಿಸಿ ಮಹಾನಗರಪಾಲಿಕೆ ಒಂದು ವಿನೂತನ ಯೋಜನೆ ರೂಪಿಸಿದೆ.
ಈ ತಿಂಗಳು ೯ ರಿಂದ ೧೧ರ ವರೆಗೆ ನೂತನ ಟ್ರೇಡ್ ಲೈಸೆನ್ಸ್ ಕ್ಯಾಂಪ್ ಹೆಸರಿನಲ್ಲಿ ನಡೆಯಲಿರುವ ಈ ಮೂರು ದಿನಗಳ ಕ್ಯಾಂಪ್ ಬೆಳಿಗ್ಗೆ ೧೦ ರಿಂದ ಸಾಯಂಕಾಲ ೫.೦೦ವರೆಗೆ ನಡೆಯಲಿರುವ ಈ ಕ್ಯಾಂಪ್‌ನ್ನು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ವ್ಯಾಪ್ತಿಯಲ್ಲಿಯ ದತ್ತ ಮಂದಿರದ ಹತ್ತಿರ ಹಾಕಲಿದೆ.
ಈ ಕುರಿತಂತೆ ಮಹಾನಗರಪಾಲಿಕೆಯ ಆಯುಕ್ತರು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ, ನಗರದ ಉದ್ದಿಮೆದಾರರು ಮೇಲ್ಕಂಡ ಸಮಯದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗುವ ಮೂಲಕ ಸುವರ್ಣಾವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದು ಅಲ್ಲದೇ ಹೆಚ್ಚಿನ ಮಾಹಿತಿಗೆ ಪಾಲಿಕೆಯ ಅರೋಗ್ಯಾಧಿಕಾರಿ ಡಾ. ವಿನೋದಕುಮಾರ ಅವರನ್ನು ಈ ಸೆಲ್ ಸಂಖ್ಯೆಗೆ ೯೭೪೦೬೨೭೫೪೭ ಅವರನ್ನು ಸಂಪರ್ಕಿಸಲು ಸಹ ಆಯುಕ್ತರು ಕೋರಿದ್ದಾರೆ.

LEAVE A REPLY

Please enter your comment!
Please enter your name here