ಅಫಜಲಪೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಗ್ಗೆ ಅಧ್ಯಕ್ಷ

0
1053

ಕಲಬುರಗಿ, ಸೆ. 7: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಫಜಲಪುರ ತಾಲೂಕ ಘಟಕದ ಅಧ್ಯಕ್ಷರಾಗಿ ಈರಣ್ಣ ಮಲ್ಲೇಶಪ್ಪ ವಗ್ಗೆ ಅವರನ್ನು ಆಯ್ಕೆ ಮಾಡಲಾಯಿತು.
ಅಫಜಲಪುರ ಪ್ರವಾಸಿ ಮಂದಿರದಲ್ಲಿ ನಿನ್ನೆ ರವಿವಾರ ನಡೆದ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ ಅವರು ವಗ್ಗೆ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ಘೋಷಿಸಿದರು.
ಪ್ರವಾಸಿಮಂದಿರದಲ್ಲಿ ಸಭೆ ಸೇರಿದ ಅಫಜಲಪೂರ ತಾಲೂಕ ಪತ್ರಕರ್ತರು ವಗ್ಗೆ ಪರವಾರಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಎಲ್ಲರೂ ಅಂದರೆ ಸೇರಿದ 13 ಜನರಲ್ಲಿ ವಗ್ಗೆ ಪರ 11 ಜನರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕರ‍್ಯಕಾರಿಣಿ ಸದಸ್ಯರಾದ ದೇವೆಂದ್ರ ಹೆಚ್. ಕಪನೂರ, ಜಿಲ್ಲಾ ಸಮಿತಿಯ ಕೋಶಾಧ್ಯಕ್ಷರಾದ ರಾಜು ಎಂ. ದೇಶಮುಖ ಅವರ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಳೆದ 6 ತಿಂಗಳ ಹಿಂದೆಯಷ್ಟ ಅಫಜಲಪೂರ ತಾಲೂಕ ಪತ್ರಕರ್ತ ಸದಸ್ಯರು ಸಭೆ ಸೇರಿದ್ದು, ಆ ಸಂದರ್ಭದಲ್ಲಿ ಇಬ್ಬರು ಸದಸ್ಯರು ಅಧ್ಯಕ್ಷ ಪದವಿಗಾಗಿ ಪೈಪೋಟಿ ನಡೆಸಿದ್ದು, ಆ ಸಂದರ್ಭದಲ್ಲಿ ಕೂಡ ಜಿಲ್ಲಾ ಸಮಿತಿಯ ಅವರೆಲ್ಲರ ಅಭಿಪ್ರಾಯವನ್ನು ಸಂಗ್ರಹ ಮಾಡಿತ್ತು. ಮಾರ್ಚನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಮತ್ತೆ ನಿನ್ನೆ ಸೇರಿದ ಸಭೆಯಲ್ಲಿ ಅಂತಿಮ ವಾಗಿ ನೆನೆಗುದಿಗೆ ಬಿದ್ದಿದ ಈ ಪ್ರಕ್ರಿಯೆ ಮುಕ್ತಾಯವಾದಂತಾಯಿತು.
ಸಭೆಯಲ್ಲಿ ಇನ್ನಿತರ ತಾಲೂಕ ಘಟಕದ ಪದಾಧಿಕಾರಿಗಳ ನೇಮಕದ ಹೊಣೆ ನೂತನ ಅಧ್ಯಕ್ಷರಿಗೆ ನೀಡಲಾಯಿತು.
ರವಿವಾರ ಸೇರಿದ ಸಭೆಯಲ್ಲಿ ಪತ್ರಕರ್ತರಾದ ಎ.ಬಿ. ಪಟೆಲ್ ಸೊನ್ನ, ಮಂಜುನಾಥ ಅಂಜುಟಗಿ, ಮಲ್ಲಿಕಾರ್ಜುನ ಹಿರೇಮಠ, ಅಶೋಕ ಕಲ್ಲೂರ, ಸಿದ್ದು ಶಿವಣಗಿ, ಡಾ. ಸಂಗಣ್ಣ ಸಿಂಗೆ, ಅರುಣ ಹೂಗಾರ, ಬಸೀರ ಚೌಧರಿ, ಉಮೇಶ ಅಚಲೇರಿ, ನರೇಂದ್ರ ನರೋಣ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here