ಕಲಬುರಗಿ, ಸೆ. 2: ಕೋವಿಡ್ ಅವಧಿಯಲ್ಲಿ ಯಾವುದೆ ಸರ್ಕಾರಿ ಕಾರ್ಯಕ್ರಮಗಳಿಲ್ಲದೇ ನಾವು ಮತ್ತು ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. 4-5 ತಿಂಗಳಿAದ ಸರಕಾರಿ ಜನ ಜಾಗ್ರತಿಗಾಗಿ ಯಾವುದೇ ಕಾರ್ಯಕ್ರಮವು ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ ಎಲ್ಲಾ ಕಾರ್ಯಕ್ರಮಗಳು ರದ್ದುಮಾಡಿದ್ದು ಇದರಿಂದ ನಮ್ಮ ಕುಟುಂಬದವರ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ರಾಜ್ಯ ಬೀದಿ ನಾಟಕ ಒಕ್ಕೂಟಗಳ ಜಿಲ್ಲಾ ಘಟಕದ ಕಲಾವಿದರ ಸಂಘವು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
ಕೋವಿಡ್-19 ಅವಧಿಯಲ್ಲಿ ನಿರುದ್ಯೋಗಿಗಳಾಗಿರುವ ನಮ್ಮ ಕಲಾವಿದರಿಗೆ ಕೂಡಲೇ ಕಾರ್ಯಕ್ರಮ ಪ್ರಾರಂಭಿಸಲು ಅನುವು ಮಾಡಿಕೊಡಬೇಕೆಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಂಘದ ಅಧ್ಯಕ್ಷರಾದ ಶಶಿಕಾಂತ ಎಸ್. ಕಾಂಬಳೆ, ಹಾಗೂ ಉಪಾಧ್ಯಕ್ಷರಾದ ಗಂಗೂಬಾಯಿ ಬಿ. ಅವರು ಈ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ನಮಗೆ ಪುನಃ ಸರಕಾರದ ಮಾರ್ಗಸೂಚಿಯಂತೆ ಜನಜಾಗ್ರತಿಗಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮಗಳು ಪುನಃ ಪ್ರಾರಂಭಿಸಿ, ಕಲಾವಿದರಿಗೆ ಹಾಗೂ ಅವರ ಕುಟುಂಬಗಳಿಗೆ ಪರೋಕ್ಷ ಸಹಾಯ ಹಾಗೂ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.