ರಾಜ್ಯದಲ್ಲಿ ನಾಲ್ಕು ದಿನದಲ್ಲಿ 4ಲಕ್ಷಕ್ಕೆ ಏರಲಿರುವ ಕೊರೊನಾ ಸೋಂಕಿತರ ಸಂಖ್ಯೆ

0
1040

ಬೆAಗಳೂರು, ಸೆ. 2:ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ 9860 ಹೊಸ ಪ್ರಕರಣ ಗಳು ದಾಖಲಾಗಿದ್ದು, ಈ ಸಂಖ್ಯೆ ಕಳೆದ ಒಂದು ವಾರದಿಂದ ಏರುತ್ತಲೇ ಇದೆ.
ಕೊರೊನಾ ಮಾರಕ ಸೋಂಕಿಗೆ ಇಂದು 113 ಜನರು ಬಲಿಯಾಗಿದ್ದು, ಇಲ್ಲಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವರದಿಯಾದಂತೆ ಒಟ್ಟು 5950 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರವೊಂದರಲ್ಲೆ ಇಂದು 32 ಜನರು ಈ ಸೋಂಕಿನಿAದ ಸಾವನ್ನಪ್ಪಿದ್ದು, ಉಳಿದಂತೆ ಮೈಸೂರಿನಲ್ಲಿ 11, ಧಾರವಾಡದಲ್ಲಿ 10 ಎರಡಂಕಿಯಲ್ಲಿ ಜನರು ರೋಗಕ್ಕೆ ತುತ್ತಾ ದರೆ ಉಳಿದ ಜಿಲ್ಲೆಗಳಲ್ಲಿ ಒಂದAಕ್ಕಿಯಲ್ಲಿ ಸಾವನ್ನಪ್ಪಿದ ಘಟನೆಗಳು ವರದಿಯಾಗಿವೆ.
ಇಂದು ಕಲಬುರಗಿ ಮತ್ತು ಬಳ್ಳಾರಿಯಲ್ಲಿ 5 ಜನರು ಬಲಿಯಾಗಿದ್ದು, ಇಲ್ಲಿ ಕ್ರಮವಾಗಿ ಇಂದಿನವರೆಗೆ 219 ಮತ್ತು 269 ಜನರು ಸಾವಿಗೀಡಾಗಿದಂತಾಗಿದೆ.
ರಾಜ್ಯದಲ್ಲಿ ಇಂದು 6287 ಜನರು ಸೇರಿದಂತೆ ಈವರೆಗೆ 2 ಲಕ್ಷ 60 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 361341 ಸಕ್ರೀಯ ಪ್ರಕರಣಗಳು ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ಇಂದು 3240 ಜನರಿಗೆ ಹೊಸದಾಗಿ ಕೊರೊನಾ ರೋಗ ವಕ್ಕರಿಸಿದ್ದು, ಈವರೆಗೆ ಬೆಂಗಳೂರಿನಲ್ಲಿ 1355512 ರೋಗ ತಗುಲಿದ್ದು, ಅದರಲ್ಲಿ ಈವರೆಗೆ 95563 ಜನರು ಬಿಡುಗಡೆಯಾಗಿದ್ದು, ಆಸ್ಪತ್ರೆಯಲ್ಲಿ ಇನ್ನು 40 ಸಾವಿರ ಜನರು ಚಿಕಿತ್ಸೆ ಪಡೆಯು ತ್ತಿದ್ದಾರೆ.
ಮೈಸೂರು ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಲೇ ಬಂದಿದ್ದು, ಇಂದು ಸಹ 667 ಜನರಿಗೆ ಸೋಂಕು ತಗುಲಿದೆ.
ಬೆಳಗಾವಿಯಲ್ಲಿ 470, ಬಳ್ಳಾರಿಯಲ್ಲಿ 433, ದಕ್ಷಿಣ ಕನ್ನಡದಲ್ಲಿ 414, ತುಮಕೂರಿನಲ್ಲಿ 357, ಶಿವಮೊಗ್ಗ 342, ಧಾರವಾಡದಲ್ಲಿ 327, ಹಾಸನ 290, ಕೊಪ್ಪಳ 282, ಮಂಡ್ಯ 245, ಗದಗ 195, ಕಲಬುರಗಿ 194, ಹಾವೇರಿ 149, ಉಡುಪಿ 169, ಬೆಂಗಳೂರು ಗ್ರಾಮಾಂತರ 146, ಚಿತ್ರದುರ್ಗ 174, ಬಾಗಲಕೋಟೆ 166, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 117, ಉತ್ತರ ಕನ್ನಡ 126, ವಿಜಯಪುರ 122, ಯಾದಗಿರ 106, ರಾಮನಗರ 59, ಕೋಲಾರ 83, ಬೀದರ 62, ಚಾಮರಾಜನಗರ 67, ಕೊಡಗು ಜಿಲ್ಲೆಯಲ್ಲಿ 25 ಜನರಿಗೆ ಹೊಸದಾಗಿ ಕೊರೊನಾ ಸೋಂಕು ವಕ್ಕರಿಸಿದೆ.

LEAVE A REPLY

Please enter your comment!
Please enter your name here