ಕಲಬುರಗಿ,ಆ.29-ನಗರದಲ್ಲಿ ಕಳೆದ ಎರಡು ದಿನಗಳಿಂದ ಮತ್ತೇ ಗುಂಡಿನ ಸದ್ದು ನಡೆಯತೊಡಗಿದ್ದು ಜನರು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಮೊನ್ನೆಯಷ್ಟ ಗೋದುತಾಯಿ ನಗರದಲ್ಲಿ ಉದ್ಯಮಿಯೊಬ್ಬರ ಕೊಲೆಯ ಬೆನ್ನಲ್ಲೆ ಮತ್ತೊಂದು ಇಂದು ಢಮಾರ ಗುಂಡಿನ ದಾಳಿ ನಡೆದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ನಗರದ ಕೆಸರಟಗಿ ಬಳಿ ಕೊಲೆಯತ್ನ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ ಘಟನೆ ಶನಿವಾರ ಬೆಳ್ಳಂಬೆಳ್ಳಗೆ ನಡೆದಿದೆ.
ಮಿರ್ಜಾ ಮಹ್ಮದ್ ಅಬ್ದುಲ್ ಬೇಗ ಅಲಿಯಾಸ್ ಫಯಿಮ್ ಮಿರ್ಜಾ ಎಂಬಾತನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದು, ಬಲಗಾಲಿಗೆ ಗುಂಡೇಟು ತಗುಲಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ, ಗುಂಡೇಟಿನಿAದ ಗಾಯಗೊಂಡಿರುವ ರೌಡಿಶೀಟರ್ ನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಿರ್ಜಾ ಮಹ್ಮದ್ ಅಬ್ದುಲ್ ಬೇಗ್‌ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನಗರದ ಕೆಸರಟಗಿ ರಸ್ತೆಯಲ್ಲಿರುವ ಸಿದ್ದಿಕಿ ಲೆಸಿಡೆನ್ಸ್ನ ಖುಲ್ಲಾ ನಿವೇಶನದಲ್ಲಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತçಗಳನ್ನು ಮುಚ್ಚಿಟ್ಟಿದ್ದಾಗಿ ಹೇಳಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದುಕೊಂಡು ಆ ಸ್ಥಳಕ್ಕೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಎಲ್.ಹೆಚ್.ಗೌಂಡಿ ಮತ್ತು ಸಿಬ್ಬಂದಿಗಳಾದ ಅಂಬಾದಾಸ ಮತ್ತು ರಿಫಿಕ್ ಅವರ ಮೆ ಲೆ ಮಿರ್ಜಾ ಮಹ್ಮದ್ ಅಬ್ದುಲ್ ಬೇಗ್ ಮಾರಕಾಸ್ತçಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪ್ರಾಣ ರಕ್ಷಣೆಗಾಗಿ ಆತನ ಮೇಲೆ ಬಲಗಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.ಘಟನೆ ಹಿನ್ನೆ ಲೆಕಳೆದ ಜೂನ್ 29 ರಂದು ರಾತ್ರಿ ರಾಮ ನಗರದ ಸಾಗರ ಭೈರಾಮಡಗಿ (22) ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಬೈಕ್ ಮೇ ಲೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಜ್ ಹತ್ತಿರದಿಂದ ಪಿಆಂಡ್‌ಟಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಮಿರ್ಜಾ ಫಯಿಮ್ ಬೇಗ್, ಹಡ್ಡಿ ಪಿಂಟ್ಯಾ ಮತ್ತಿತರರು ಕೂಡಿಕೊಂಡು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಅವರ ಮೇಲೆ ಮಾರಕಾ ಸ್ತçಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು. ಈ ಸಂಬAಧ ಸಾಗರ ಅವರ ತಂದೆ ಮಹಾಂತೇಶ ಧರ್ಮರಾಯ ಭೈರಾಮಡಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಎನ್. ಸತೀಷಕುಮಾರ, ಉಪ ಪೊಲೀಸ್ ಆಯುಕ್ತರಾದ ಡಿ.ಕಿಶೋರ ಬಾಬು, ಶ್ರೀಕಾಂತ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಎ ಉಪ ವಿ ಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಅವರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಎ ಲ್.ಹೆಚ್.ಗೌಂಡಿ ತನಿಖೆ ನಡೆಸಿ ಆ.28 ರಂದು ಆರೋಪಿ ಮಿರ್ಜಾ ಮಹ್ಮದ್ ಅಬ್ದು ಲ್ ಬೇಗ್ ನನ್ನು ಬಂಧಿಸಿದ್ದರು.ಆರೋಪಿ ಮಿರ್ಜಾ ಮಹ್ಮದ್ ಅಬ್ದುಲ್ ಬೇಗ್ ಕೃತ್ಯಕ್ಕೆ ಬಳಸಿದ ಮಾರಕಾಸ್ತçವನ್ನು ನಗರ ಹೊರವಲಯದ ಕೆ ಸರಟಗಿ ರಸ್ತೆಯಲ್ಲಿರುವ ಸಿದ್ದಿಕಿ ರೆಸಿಡೆನ್ಸಿಯ ಖುಲ್ಲಾ ನಿವೇಶನದಲ್ಲಿ ಮುಚ್ಚಿಟ್ಟಿರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಆತನನ್ನು ಇಂದು ಬೆಳಗಿನಜಾವ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಮಿರ್ಜಾ ಮಹ್ಮದ್ ಅಬ್ದು ಲ್ ಬೇಗ್ ಪಿಐ ಎ ಲ್.ಎಚ್.ಗೌಂಡಿ ಮತ್ತು ಸಿಬ್ಬಂದಿಗಳಾದ ಅಂ ಬಾದಾ ಸ ಮತ್ತು ರಫೀಕ್ ಅವರ ಮೇ ಲೆ ಮಾರಕಾ ಸ್ತçಗಳಿಂದ ಮಾರಣಾಂತಿಕವಾಗಿ ಹ ಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪ್ರಾಣ ರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಕೊಲೆ, ಕೊಲೆ ಯತ್ನ ಪ್ರಕರಣರೌಡಿಶೀಟರ್ ಮಿರ್ಜಾ ಮಹ್ಮದ್ ಅಬ್ದುಲ್ ಬೇಗ್ (39) ವಿದ್ಯಾ ನಗರ ನಿವಾಸಿಯಾಗಿದ್ದು, ಸದ್ಯ ಹಾಗರಗಾ ಕ್ರಾ ಸ್ ಹತ್ತಿರ ವಾ ಸವಿದ್ದ. ಈತನ ವಿರುದ್ಧ ನಗರದ ನಗರದ ವಿವಿಧ ಪೊಲೀ ಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ ಮತ್ತು ಆಯುಧ ಅಧಿನಿಯಮ ಕಾಯ್ದೆಯಡಿ ಪ್ರಕರಣ ದಾಖ ಲಾಗಿವೆ. ಸ್ಟೇಷನ್ ಬಜಾರ್ ಪೊಲೀ ಸ್ ಠಾಣೆಯಲ್ಲಿ ಕೊಲೆ ಮತ್ತು ಸುಲಿಗೆ, ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಮತ್ತು ಆಯುಧ ಅಧಿನಿಯಮ ಕಾಯ್ದೆಯಡಿ ಪ್ರಕರಣ, ರೋಜಾ ಪೊಲೀಸ್ ಠಾಣೆಯಲ್ಲಿ ಕೊ ಲೆ ಪ್ರಕರಣ, ಫರತಾ ಬಾದ ಪೊಲೀಸ್ ಠಾಣೆಯಲ್ಲಿ ಎ ಸ್.ಸಿ./ಎ ಸ್.ಟಿ.ಕಾಯ್ದೆಯಡಿ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣ ದಾಖ ಲಾಗಿವೆ.ಈತ ರೋಜಾ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಹೈದ್ರಾಬಾದನ ಜ್ಯೂಬಿಲಿ ಹಿಲ್ಸ್ ಏರಿಯಾದಲ್ಲಿ ಕೊಲೆಗೆ ಯತ್ನಿಸಿದ್ದ ಮತ್ತು ಆಯುಧ ಅಧಿನಿಯ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ