ಕಲಬುರಗಿ, ಆಗಸ್ಟ. 26: ನಾಳೆ 27 ಮತ್ತು 28ರಂದು ರಾಯಚೂರು, ಯಾದಗಿರ, ಕಲಬುರಗಿ ಹಾಗೂ ಬೀದರ ಜಿಲ್ಲೆಗಳ ಭಾರತೀಯ ಜನತಾ ಪಕ್ಷದ ಮುಖಂಡರ ಸಭೆಯನ್ನು ರಾಜ್ಯಾಧ್ಯಕ್ಷರಾದ ನಳೀನಕುಮಾರ ಕಟೀಲ್ ಅವರು ನಡೆಸುವ ಮೂಲಕ ಬಿಜೆಪಿಯನ್ನು ತಳಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಒಂದು ವರ್ಷದಲ್ಲಿ ನಾಲ್ಕು ಬಾರಿ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದ ನಳೀನಕುಮಾರ ಕಟೀಲ್ ಅವರು ಆಗಸ್ಟ 27ರಂದು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಹಾಗೂ ಯಾದಗಿರ ಜಿಲ್ಲೆಯ ಶಹಾಪೂರದಲ್ಲಿ ಬಿಜೆಪಿ ಮುಖಂಡರ ಸಭೆಯನ್ನು ನಡೆಸಿ, ಅಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆಯೂ ಚರ್ಚಿಸಲಿದ್ದಾರೆ.
27ರ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡಿ 28ರಂದು ಬೆಳಿಗ್ಗೆ ಕಲಬುರಗಿಯಲ್ಲಿ ಮತ್ತು ಮಧ್ಯಾಹ್ನ ಗ್ರಾಮೀಣ ಕ್ಷೇತ್ರದ ಕಮಲಾಪೂರ ದಲ್ಲಿ ಸಭೆ ನಡೆಸಿ, ನಂತರ ಬೀದರ ಜಿಲ್ಲೆಯ ಹುಮನಾಬಾದನಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಬರುವ ದಿನಗಳಲ್ಲಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾ ಯತ್, ಹಾಗೂ ವಿಧಾನ ಪರಿಷತ್ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯ ಬಗ್ಗೆ ಚರ್ಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಶಿವರಾಜ ರದ್ದೆವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಓಬಿಸಿ ಉಪಾಧ್ಯಕ್ಷರಾದ ಶರಣಪ್ಪ ತಳವಾರ, ಮುಕುಂದ ದೇಶಪಾಂಡೆ ಸೇರಿದಂತೆ ಅನೇಕರು ಉಪಸ್ಥಿತ ರಿದ್ದರು.
Home Uncategorized ಬಿಜೆಪಿ ಗಟ್ಟಿಗೊಳಿಸಲು ಕಲಬುರಗಿ ಜಿಲ್ಲೆಗೆ 27, 28ರಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರವಾಸ: ತೇಲ್ಕೂರ್