ರಾಜ್ಯದಲ್ಲಿ ಮಂಗಳವಾರ 8161 ಹೊಸ ಕರೊನಾ ಪ್ರಕರಣಗಳ ಪತ್ತೆ 148 ಜನರ ಸಾವು: 3 ಲಕ್ಷ ಸಮೀಪಿಸುತ್ತಿರುವ ಸೋಂಕಿತರ ಸಂಖ್ಯೆ

0
816

ಬೆಂಗಳೂರು, ಆಗಸ್ಟ. 25: ರಾಜ್ಯದಲ್ಲಿ ಅನ್‌ಲಾಕ್ 4.0 ನಿನ್ನೆಯಷ್ಟೆ ಆಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಹೊಸದಾಗಿ 8161 ಜನರು ಕೊರೊನಾದಿಂದ ಆಸ್ಪತ್ರೆ ಸೇರಿದ್ದಾರೆ.
ಅಲ್ಲದೇ ಕಳೆದ 24 ಗಂಟೆಗಳಲ್ಲಿ 148 ಜನರು ಈ ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 4958ಕ್ಕೆ ಏರಿದೆ.
ಇಂದು ಆಸ್ಪತ್ರೆಯಿಂದ 6814 ಜನರು ಸೇರಿದಂತೆ ಇಲ್ಲಿಯವರೆಗೆ 204433 ಜನರು ಬಿಡುಗಡೆ ಹೊಂದಿದ್ದು, ರಾಜ್ಯದಲ್ಲಿ ಈವರೆಗೆ 82410 ಪ್ರಕರಣಗಳು ಮಾತ್ರ ಸಕ್ರೀಯವಾಗಿವೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 291826 ಆಗಿದ್ದು, ಈ ತಿಂಗಳ ಅಂತ್ಯಕ್ಕೆ ಈ ಸಂಖ್ಯೆ 3.5ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ.
751 ಜನರು ತರ್ತು ಚಿಕಿತ್ಸೆಗಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು 61 ಜನರು ಈ ರೋಗಕ್ಕೆ ಬಲಿಯಾಗಿದ್ದು, ಉಳಿದಂತೆ ಮೈಸೂರಿನಲ್ಲಿ 16, ಧಾರವಾಡದಲ್ಲಿ 8, ಬಳ್ಳಾರಿಯಲ್ಲಿ 6 ಜನರು ಮತ್ತು ದಾವಣಗೇರಿಯಲ್ಲಿ 5, ಹಾವೇರಿಯಲ್ಲಿ 5, ಕೊಪ್ಪಳ 6, ಚಿತ್ರದುರ್ಗ, ದಕ್ಷಿಣ ಕನ್ನಡ ಮತ್ತು ಕಲಬುರಗಿಯಲ್ಲಿ ತಲಾ ಮೂರು ಜನರು ಸಾವನ್ನಪ್ಪಿದ್ದು, ಇನ್ನು ಉಳಿದ ಜಿಲ್ಲೆಗಳಲ್ಲಿ ಒಂದೇರಡು ಸಾವು ಸಂಭವಿಸಿವೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಇಂದು ವರದಿಯಾಗಿರುವಂತೆ ಬೆಂಗಳೂರು ನಗರದಲ್ಲಿ 2294, ಮೈಸೂರಿನಲ್ಲಿ 1331, ಬಳ್ಳಾರಿಯಲ್ಲಿ 551, ಬೆಳಗಾವಿಯಲ್ಲಿ 298, ದಾವಣಗೆರಿಯಲ್ಲಿ 318, ದಕ್ಷಿಣ ಕನ್ನಡದಲ್ಲಿ 247, ಶಿವಮೊಗ್ಗ 276, ತುಮಕೂರ 223, ಉಡುಪಿ 217, ಕೊಪ್ಪಳ 238, ಹಾಸನ 205, ಗದಗ 175, ಕಲಬುರಗಿ 227, ಮಂಡ್ಯ 153, ಉತ್ತರ ಕನ್ನಡ 141, ವಿಜಯಪುರ 135, ಯಾದಗಿರ 132, ಬಾಗಲಕೋಟ 83, ಬೆಂಗಳೂರು ಗ್ರಾಮಾಂತರ 63, ಬೀದರ 61, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 88, ಹಾವೇರಿ 78, ಕೋಲಾರ 47, ರಾಯಚೂರು 88, ರಾಮನಗರ 56, ಕೋಲಾರ 47, ಕೊಡಗಿನಲ್ಲಿ 8 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಕಲಬುರಗಿಯಲ್ಲಿ ಇಂದು 3 ಸಾವು
ದೇಶದಲ್ಲಿಯೇ ಕೊರೊನಾಗೆ ಪ್ರಥಮ ಬಲಿ ಕಲಬುರಗಿ ಜಿಲ್ಲೆಯಲ್ಲಾಗಿದ್ದು, ಇಂದು ಈ ಸೋಂಕಿಗೆ 3 ಜನರು ಬಲಿಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಕೋವಿಡ್-19ಗೆ ಒಟ್ಟು 195 ಜನರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇಂದು 227 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಇಲ್ಲಿಯವರೆಗೆ 10545 ಜನರು ಈ ರೋಗದಿಂದ ಆಸ್ಪತ್ರೆ ಸೇರಿದ್ದು, ಇವರಲ್ಲಿ 8542 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಇನ್ನು 1808 ಮಂದಿ ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here