ಕಲಬುರಗಿ, ಆಗಸ್ಟ. 25: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್. ಯು. ಸಿ.ಐ (ಸಿ ) ಕಮ್ಯುನಿಸ್ಟ್ ಪಕ್ಷದ ಸ್ಥಳೀಯ (ದಕ್ಷಿಣ ) ಸಮಿತಿಯಿಂದ ನಗರದ ನಾಗನಹಳ್ಳಿ ಹತ್ತಿರವಿರುವ ಏಕ್ತಾ ಕಾಲೋನಿ ಬಡಜನರಿಗೆ ಶಾಶ್ವತ ಮನೆ ನಿರ್ಮಿಸಿ ಕೊಡಬೇಕೆಂದು ಮತ್ತು ನಗರದಲ್ಲಿರುವ ಎಲ್ಲಾ ನಿರಾಶ್ರಿತರಿಗೆ ಸ್ವಂತ ವಸತಿ ಒದಗಿಸಲು ಒತ್ತಾಯಿಸಿ ಕಲ್ಬುರ್ಗಿಯ ಮಿನಿ ವಿಧಾನಸೌಧ ಎದುರುಗಡೆ ಪ್ರತಿಭಟನಾ ಪ್ರದರ್ಶನವನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಎಸ್. ಎಂ. ಶರ್ಮಾ, ಭೀಮಾಶಂಕರ್ ಪಾಣೇಗಾಂವ, ಡಾ. ಸೀಮಾ ದೇಶಪಾಂಡೆ, ಮಲ್ಲಿನಾಥ್ ಸಿಂಘೆ, ಮಹೇಶ್ ಎಸ್. ಬಿ. ಈರಣ್ಣ ಇಸ್ಬಾ, ಶರಣು ವಿ. ಕೆ. ಮಲ್ಲು ಧರಿಯಾಪುರ್, ಜಾವೇದ್, ವಾಜಿದ ಶೇಖ್ ಸೇರಿದಂತೆ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.